ಸುರತ್ಕಲ್: ಅಸ್ವಸ್ಥ ಪ್ರಯಾಣಿಕನ ಜೀವ ಉಳಿಸಲು ಬಸ್ ನಿರ್ವಾಹಕನ ಹರಸಾಹಸ

(ನ್ಯೂಸ್ ಕಡಬ) newskadaba.com ಮಂಗಳೂರು . 20: ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಏಕಾಏಕಿ ಅಸ್ವಸ್ಥಗೊಂಡ ಪ್ರಯಾಣಿಕನ ಜೀವ ಉಳಿಸಲು ಬಸ್ಸಿನ ನಿರ್ವಾಹಕ ಜೀವದ ಹಂಗು ತೊರೆದು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಸುರತ್ಕಲ್ ಸಮೀಪದ ಬಜಪೆ ಕೈಕಂಬ ಮಾರ್ಗವಾಗಿ ಸಂಚರಿಸುವ ಶಾನ್ ಎಂಬ ಸರ್ವಿಸ್ ಬಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉತ್ತರ ಪ್ರದೇಶದ ವಾರಣಾಸಿ ನಿವಾಸಿ ರಾಜೇಶ್ ಚೌಹಾನ್ (40) ಸುರತ್ಕಲ್ ಸನಿಹದ ಕಾಟಿಪಳ್ಳ ಬಳಿ ದಿಢೀರ್ ಅಸ್ವಸ್ಥಗೊಂಡು ಕುಸಿದು ಬಿದ್ದರು.

ತಕ್ಷಣ ಗಣೇಶ್ ಅವರು ಟಿಕೆಟ್ ಕಲೆಕ್ಷನ್ ಕೆಲಸ ಚಾಲಕ ರಮೇಶ್ ಅವರಿಗೆ ವಹಿಸಿ ಈತನನ್ನು ಸುರತ್ಕಲ್ ಖಾಸಗಿ ಆಸ್ಪತ್ರೆಗೆ ಕರೆ ತಂದರು. ಆದರೆ, ಆರೋಗ್ಯ ಸ್ಥಿತಿ ಕೈ ಮೀರಿದ್ದರಿಂದ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸಲಹೆ ನೀಡಿದರು. ತಕ್ಷಣ ಆಂಬ್ಯುಲೆನ್ಸ್ ನಲ್ಲಿ ತಾವೇ ವೆಚ್ಚ ಭರಿಸಿ ವೆನ್ ಲಾಕ್ ಗೆ ಕರೆ ತಂದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಚೌಹಾನ್ ಮೃತಪಟ್ಟರು. ಬಳಿಕ ಘಟನೆ ಕುರಿತು ಸುರತ್ಕಲ್ ಪೊಲೀಸರಿಗೆ ಗಣೇಶ್ ಮಾಹಿತಿ ನೀಡಿ ದೂರು ದಾಖಲಿಸಿದರು.ಹೊರ ರಾಜ್ಯದ ಕಾರ್ಮಿಕನ ಜೀವ ಉಳಿಸಲು ತನ್ನ ಕೆಲಸ ಬಿಟ್ಟು ದಿನ ಪೂರ್ತಿ ಆತನ ಬಳಿ ಇದ್ದು ಸ್ಪಂದಿಸಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಸುರತ್ಕಲ್ ಪೊಲೀಸ್ ಸಿಐ ಚಂದ್ರಪ್ಪ ಹಾಗೂ ಠಾಣೆ ಅಧಿಕಾರಿಗಳು, ಸಿಬ್ಬಂದಿ ಗಣೇಶ್ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಅಭಿನಂದಿಸಿದ್ದಾರೆ.

Also Read  ಮಂಗಳೂರು: (ನಾಳೆ)ಮೇ.10ರಂದು ಸಾರ್ವತ್ರಿಕ ಚುನಾವಣೆ ಹಿನ್ನೆಲೆ ರಜೆ ಘೋಷಣೆ

error: Content is protected !!
Scroll to Top