ಹಾಸನ: ವೇಲ್ ಕಟ್ಟಿ ನಾಲೆಗೆ ಜಿಗಿದು ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

(ನ್ಯೂಸ್ ಕಡಬ) newskadaba.com ಹಾಸನ . 20: ಹಾಸನ ಜಿಲ್ಲೆಯ ತಿಪಟೂರು ತಾಲೂಕಿನ ಬೆಳಗರಹಳ್ಳಿಯಲ್ಲಿ ಮದುವೆಗೆ ಹೆತ್ತವರ ವಿರೋಧ ಕಟ್ಟಿಕೊಂಡ ಪರಿಣಾಮ ಹೇಮಾವತಿ ನಾಲೆಗೆ ಜಿಗಿದು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಪಟ್ಟ ಪ್ರೇಮಿಗಳನ್ನು ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದ ಸುಶ್ಮಿತ(18) ಹಾಗೂ ಮತಿಘಟ್ಟ ಗ್ರಾಮದ ರಮೇಶ್(19) ಎಂದು ಗುರುತಿಸಲಾಗಿದೆ.

 

Xl

 

ನ.16 ರಂದು ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಬಳಿಯ ಹೇಮಾವತಿ ಕಾಲುವೆ ಸುರಂಗದ ಬಳಿ ಬೈಕ್ ಮತ್ತು ಚಪ್ಪಲಿ ಬಿಟ್ಟು ನಾಪತ್ತೆಯಾಗಿದ್ದ ಈ ಯುವ ಪ್ರೇಮಿಗಳ ಮೃತದೇಹ ತುಮಕೂರು ಜಿಲ್ಲೆ ನೊಣವಿನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಹೇಮಾವತಿ ನಾಲೆಯಲ್ಲಿ ಪತ್ತೆಯಾಗಿದೆ. ಪದವಿ ಓದುತ್ತಿದ್ದ ಸುಶ್ಮಿತಾ ಹಾಗೂ ಐಟಿಐ ಓದುತ್ತಿದ್ದ ರಮೇಶ್ ಇವರಿಬ್ಬರು ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಇವರಿಬ್ಬರೂ ಬೇರೆ ಬೇರೆ ಜಾತಿಯಾಗಿದ್ದರಿಂದ ಮನೆಯಲ್ಲಿ ಮದುವೆಗೆ ವಿರೋಧ ಇತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರೀಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಪತ್ತೆಯಾಗಿರುವ ಕುರಿತು ಕೇಸು ದಾಖಲಾಗಿತ್ತು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮನೆಯವರ ವಿರೋಧಕ್ಕೆ ಹೆದರಿ ಯುವಜೋಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Also Read  SDPI ಪಕ್ಷದ 2ನೇ ಪಟ್ಟಿ ರಿಲೀಸ್ ➤ ಶಾಫಿ ಬೆಳ್ಳಾರೆ ಪುತ್ತೂರು ಅಭ್ಯರ್ಥಿ !

 

Xl

 

error: Content is protected !!
Scroll to Top