(ನ್ಯೂಸ್ ಕಡಬ) newskadaba.com ಮಂಗಳೂರು ನ. 20: ಮಲೈಕಾ ಸೊಸೈಟಿ ಹೆಸರಲ್ಲಿ ಗ್ರಾಹಕರಿಂದ ಕೋಟ್ಯಂತರ ರೂ. ಠೇವಣಿ ಸಂಗ್ರಹಿಸಿ ವಂಚನೆ ನಡೆಸಿದ ಬಗ್ಗೆ ದೂರು ದಾಖಲಾಗಿದೆ. ಈ ಸೊಸೈಟಿಯಲ್ಲಿ ಹೆಚ್ಚಾಗಿ ಹಿರಿಯ ನಾಗರಿಕರೇ ಠೇವಣಿ ಇರಿಸಿದ್ದರು. ಹಣ ಹಿಂದಿರುಗಿ ಕೇಳಿದರೆ ಸ್ಪಂದಿಸುತ್ತಿಲ್ಲ. ಸಂಸ್ಥೆಯ ಕೆಲವರು ಠೇವಣಿಯ ಹಣವನ್ನು ಅವರವರ ಸ್ವಂತ ಖಾತೆಗಳಿಗೆ ವರ್ಗಾ ಯಿಸಿಕೊಂಡಿದ್ದಾರೆ ಎಂದು ಹಿರಿಯ ಗ್ರಾಹಕರು ದೂರು ನೀಡಿದ್ದಾರೆ.
ಆರೋಪಿಗಳ ಹೆಸರುಗಳನ್ನು ನಮೂದಿಸಿ ದೂರು ನೀಡಲಾಗಿತ್ತಾದರೂ ಕಾನೂನಿನಂತೆ ಒಬ್ಬ ವ್ಯಕ್ತಿಯ ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿ ಕೊಂಡಿದ್ದಾರೆ. ದ.ಕ. ಜಿಲ್ಲೆಯ ಮಂಗಳೂರು, ತೊಕ್ಕೊಟ್ಟು, ಬಂಟ್ವಾಳ, ಪುತ್ತೂರು, ಸುಳ್ಯ, ವಿಟ್ಲ, ಮೂಡುಬಿದಿರೆ ಮೊದಲಾದ ಕಡೆ ಮಲೈಕಾ ಎಲೆಕ್ಟ್ರಾನಿಕ್ಸ್ ಮಳಿಗೆಗಳಿವೆ. ನಗರದ ಬೆಂದೂರ್‌ವೆಲ್‌ನಲ್ಲಿ ಸೊಸೈಟಿ ಪ್ರಧಾನ ಕಚೇರಿ ಹೊಂದಿದೆ.ಸದ್ಯ ಈ ಸೊಸೈಟಿ ಮೇಲೆ ವಂಚನೆ ಕೇಸ್ ದಾಖಲಾಗಿದೆ.