(ನ್ಯೂಸ್ ಕಡಬ) newskadaba.com ಕಡಬ,ಅ.4. 102ನೇ ನೆಕ್ಕಿಲಾಡಿ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಮರ್ದಾಳ ಪೇಟೆ, ಬಜಕೆರೆ ರೈಲ್ವೆ ನಿಲ್ದಾಣ ಕರ್ಮಾಯಿ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯೆ ಕುಸುಮ ಪಿ.ವೈ.ಮರ್ದಾಳ ಗ್ರಾ.ಪಂ.ಅಧ್ಯಕ್ಷೆ ಲಲಿತಾ ರೈ ಮೈಕಾಜೆ, ಉಪಾಧ್ಯಕ್ಷೆ ಲತಾ, ಎಪಿಎಂಸಿ ನಿರ್ದೇಶಕರಾದ ಪುಲಸ್ತ್ಯ ರೈ, ಮೇದಪ್ಪ ಗೌಡ ಡೆಪ್ಪುಣಿ, ಬಿಜೆಪಿ ಗ್ರಾಮ ವಿಸ್ತಾರಕ ಉಮೇಶ್ ಶೆಟ್ಟಿ ಸಾಯಿರಾಮ್, ಗ್ರಾ.ಪಂ.ಸದಸ್ಯರಾದ ದಾಮೋದರ ಗೌಡ ಡೆಪ್ಪುಣಿ, ಹರೀಶ್ ಕೋಡಂದೂರು, ಬಿಜೆಪಿ ಗ್ರಾ.ಸಮಿತಿ ಅಧ್ಯಕ್ಷ ಮಂಜುನಾಥ ಕೋಲಂತ್ತಾಡಿ, ಯುವಮೋರ್ಚಾ ಅಧ್ಯಕ್ಷ ದುರ್ಗಾಪ್ರಸಾದ್ ಕೋಲಂತ್ತಾಡಿ ಸೇರಿದಂತೆ ಗ್ರಾಮ ಸಮಿತಿ ಸದಸ್ಯರು ಹಾಗೂ ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು.