ಬೈಕ್ ನಲ್ಲಿ ಹೋಗುತ್ತಿದ್ದಾಗ ಅಮ್ಮನ ಕೈಯಿಂದ ಬಿದ್ದು ಕಂದಮ್ಮ ಮೃತ್ಯು ➤ ಪೋಷಕರೆ ಎಚ್ಚರ ವಹಿಸಿ.!

(ನ್ಯೂಸ್ ಕಡಬ) newskadaba.com ಮಂಡ್ಯ ನ. 20: ಬೈಕಿನಲ್ಲಿ ಹೋಗುವಾಗ ಅಮ್ಮನ ಮಡಿಲಿನಲ್ಲಿ ಕೂತಿದ್ದ ಒಂದು ವರ್ಷದ ಮಗು ದಿಢೀರನೆ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಂಡ್ಯದ ಕಿರಂಗೂರು ಗ್ರಾಮದ ಬಳಿ ನಡೆದಿದೆ.ಚಂದಗಾಲು ಗ್ರಾಮ ಶಿವಕುಮಾರ್ ಮತ್ತು ರಂಜಿತಾ ದಂಪತಿ ಮೃತ ಮಗುವಿನ ಪೋಷಕರಾಗಿದ್ದಾರೆ.

 

 

ಮದುವೆ ಕಾರ್ಯಕ್ರಮವನ್ನು ಮುಗಿಸಿಕೊಂಡು ದಂಪತಿ ಮಗುವನ್ನು ಬೈಕಿನಲ್ಲಿ ಕೂರಿಸಿಕೊಂಡು ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.ಕಿರಂಗದೂರು ಗ್ರಾಮದ ಬಳಿಯ ಹಂಪ್ಸ್ ಬಳಿ ಶಿವಕುಮಾರ್ ತಮ್ಮ ಬೈಕನ್ನು ನಿಧಾನವಾಗಿ ಹಂಪ್ ಹತ್ತಿಸಿದ್ದಾರೆ. ರಂಜಿತಾ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡಿದ್ದರು. ಬೈಕ್ ಹಂಪ್ಸ್ ಹತ್ತಿದ ವೇಳೆ ಮಗು ರಂಜಿತಾ ಅವರ ಕೈಯಿಂದ ಜಾರಿ ರಸ್ತೆಗೆ ಬಿದ್ದಿದೆ. ಈ ವೇಳೆ ಮಗು ತೀವ್ರವಾಗಿ ಗಾಯಗೊಂಡಿದೆ. ಮಗುವನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಮಗು ಕೊನೆಯುಸಿರೆಳೆದಿದೆ.

Also Read  ಆ. 27ರಂದು ಜಿಲ್ಲಾ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆ

 

 

Xl

error: Content is protected !!
Scroll to Top