ಮಂಗಳೂರು: ಇನ್ಮುಂದೆ ಮನೆ ಬಾಗಿಲಿಗೇ “ಶಬರಿಮಲೆ ಶ್ರೀ ಅಯ್ಯಪ್ಪನ ಪ್ರಸಾದ”

(ನ್ಯೂಸ್ ಕಡಬ) newskadaba.com ಮಂಗಳೂರು . 20: ದೇಶದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಕೇರಳದ ಶಬರಿಮಲೆಯೂ ಒಂದು. ಈಗಾಗಲೇ ಶಬರಿಮಲೆ ಸ್ವಾಮಿ ಶ್ರೀ ಅಯ್ಯಪ್ಪನ ದರ್ಶನಕ್ಕೆ ತೆರಳುವವರಿಗೆ ಒಂದಿಷ್ಟು ನಿರ್ಬಂಧ ಜೊತೆಗೆ ಅವಕಾಶ ಕಲ್ಪಿಸಲಾಗಿದೆ.ಇದರ ಜತೆಗೆ ಅಯ್ಯಪ್ಪನ ಭಕ್ತರಿಗೆ ಇನ್ನೊಂದು ಶುಭ ಸುದ್ದಿಯೊಂದುಯಿದೆ. ಇನ್ಮುಂದೆ ಮನೆ ಬಾಗಿಲಿಗೇ ಶಬರಿಮಲೆ ಶ್ರೀ ಅಯ್ಯಪ್ಪ ಪ್ರಸಾದ ಬರಲಿದೆ.ಅಂತಹದ್ದೊಂದು ಅವಕಾಶವನ್ನು ಭಾರತೀಯ ಅಂಚೆ ಇಲಾಖೆ ಒದಗಿಸಿಕೊಡಲಿದೆ. ಭಾರತೀಯ ಅಂಚೆ ಇಲಾಖೆ ಕೇರಳ ಹಾಗೂ ಶಬರಿಮಲೆ ದೇವಸ್ಥಾನ ಆಡಳಿತ ಮಂಡಳಿ ಇಂತಹದ್ದೊಂದು ಕರಾರು ಮಾಡಿಕೊಂಡಿದೆ.

ಅದರಂತೆ ‘ಸ್ಪೀಡ್ ಪೋಸ್ಟ್’ ಮೂಲಕ ಪ್ರಸಾದವನ್ನು ಭಕ್ತರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಆಗಲಿದೆ. ಅದಕ್ಕಾಗಿ ಭಕ್ತರು ಮಾಡಬೇಕಿರುವುದು ಇಷ್ಟೇ; ತಮ್ಮ ಸಮೀಪದ ಅಂಚೆ ಕಚೇರಿಗೆ ತೆರಳಿ ಪ್ರಸಾದ ಸ್ವೀಕರಿಸಲು ಬೇಕಾದ ‘ಆರ್ಡರ್ ಫಾರಂ’ ತುಂಬಿಸಿ ತಮಗೆ ಬೇಕಾದ ಪ್ರಸಾದದ ಪ್ರಮಾಣ ಅಲ್ಲಿ ಸಲ್ಲಿಸಬೇಕು. ಒಂದು ‘ಆರ್ಡರ್ ಫಾರಂ’ನಲ್ಲಿ ಹತ್ತು ಪ್ಯಾಕೆಟ್ ಪ್ರಸಾದ ತಲಾ 450 ರೂ. ನಂತೆ ಸಲ್ಲಿಸಿ ತರಿಸಿಕೊಳ್ಳಬಹುದು. ಅದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಸಾದ ತರಿಸಿಕೊಳ್ಳಲು ಇನ್ನೊಂದು ‘ಆರ್ಡರ್ ಫಾರಂ’ ತುಂಬಬೇಕು. ಪ್ರಸಾದದ ಕಿಟ್ ನಲ್ಲಿ ಅರವಣ, ತುಪ್ಪ, ಕುಂಕುಮ, ಅರಿಶಿಣ, ವಿಭೂತಿ ಮತ್ತು ಅರ್ಚನೆ ಪ್ರಸಾದ ಇರಲಿದೆ ಎಂದು ಮಂಗಳೂರಿನ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ತಿಳಿಸಿದ್ದಾರೆ.ದ.ಕ. ಜಿಲ್ಲೆಯಲ್ಲೂ ಸಹಸ್ರಾರು ಸಂಖ್ಯೆಯಲ್ಲಿ ಸ್ವಾಮಿ ಅಯ್ಯಪ್ಪನ ಭಕ್ತರಿದ್ದು, ಅವರೆಲ್ಲರಿಗೂ ಶಬರಿಮಲೆಗೆ ತೆರಳಲು ಸಾಧ್ಯವಾಗುವುದಿಲ್ಲ. ಇ ನಡುವೆ ಇಂತಹ ಅವಕಾಶದ ಮೂಲಕ ಶಬರಿಮಲೆಯ ಪ್ರಸಾದವನ್ನು ಸ್ವೀಕರಿಸಬಹುದಾಗಿದೆ

Also Read  ಗಾಳಿ ರಭಸಕ್ಕೆ ಕುಸಿದು ಬಿದ್ದ ಮೊಬೈಲ್​ ಟವರ್

error: Content is protected !!
Scroll to Top