ಉಡುಪಿ ಪೊಲೀಸರ ಕಾರ್ಯಾಚರಣೆ ➤ 14.70 ಲಕ್ಷ ಮೌಲ್ಯದ ವಿದೇಶಿ ಹೈಡ್ರೊವಿಡ್ ಗಾಂಜಾ ವಶ

(ನ್ಯೂಸ್ ಕಡಬ) newskadaba.com ಉಡುಪಿ ನ. 20 : ಮಣಿಪಾಲ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದಾಖಲಾಗಿ ತನಿಖೆಯಲ್ಲಿದ್ದ ನಿಷೇಧಿತ ಮಾದಕ ವಸ್ತುಗಳ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ ಉಡುಪಿ ಪೊಲೀಸರು ಒಟ್ಟು 244 ಗ್ರಾಂ ತೂಕದ 462 MDMA ಮಾತ್ರೆಗಳು ಮತ್ತು 14 ಗ್ರಾಂ ವಿದೇಶಿ ಹೈಡ್ರೊವಿಡ್ ಗಾಂಜಾ ಗಳನ್ನು ವಶಪಡಿಸಿಕೊಂಡಿದ್ದಾರೆ.

 

ವಶಪಡಿಸಿಕೊಂಡ ನಿಷೇದಿತ ಮಾದಕ ವಸ್ತುಗಳ ಒಟ್ಟು ಅಂದಾಜು ರೂ 14,70 ಲಕ್ಷ  ಮೌಲ್ಯದ /- ಕಳೆದ 2 ತಿಂಗಳಲ್ಲಿ ವಿದೇಶದಿಂದ ಆಮದು ಮಾಡಿಕೊಂಡಿರುವ ನಿಷೇಧಿತ ಮಾದಕ ವಸ್ತುಗಳನ್ನು 5ನೇ ಬಾರಿಗೆ ವಶಪಡಿಸಿಕೊಳ್ಳುತ್ತಿರುವ ಉಡುಪಿ ಪೊಲೀಸರು ಮಾದಕ ವಸ್ತುಗಳ ವಿರುದ್ಧ ಕಾರ್ಯಚರಣೆ ತೀವ್ರಗೊಳಿಸಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡಲು ತಂಡಗಳನ್ನು ರಚನೆ ಮಾಡಲಾಗಿದೆ.

Also Read  ಮಸೀದಿ ಕಚೇರಿಗೆ ನುಗ್ಗಿ ಕಳವಿಗೆ ಯತ್ನ: ಆರೋಪಿ ಅರೆಸ್ಟ್

 

error: Content is protected !!
Scroll to Top