ಮಂಗಳೂರು: ಎರಡು ಪ್ರತ್ಯೇಕ ಪ್ರಕರಣ ➤ ಚಿನ್ನದ ಕರಿಮಣಿ ಸರ ಎಗರಿಸಿದ ಖದೀಮರು

(ನ್ಯೂಸ್ ಕಡಬ) newskadaba.com ಮಂಗಳೂರು . 20: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಖದೀಮರು ಮಹಿಳೆಯರಿಂದ 2.34 ಲಕ್ಷ ರೂ. ಮೌಲ್ಯದ ಚಿನ್ನದ ಸರ ಸುಲಿಗೆ ಮಾಡಿ ಪರಾರಿಯಾದ ಘಟನೆ ನಡೆದಿದ್ದು, ಕಾವೂರು ಹಾಗೂ ಕದ್ರಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

 

ರಶ್ಮಿ ಎಂಬವರು ಶಾಂತಿನಗರದ ಹೋಂಡಾ ಶೋ ರೂಂನಲ್ಲಿ ಕೆಲಸ ಮುಗಿಸಿ ಪಂಜಿಮೊಗರಿನ ಉರುಂದಾಡಿಗುಡ್ಡೆಯಲ್ಲಿರುವ ಮನೆ ಕಡೆಗೆ ಹೋಗುತ್ತಿದ್ದರು. ಈ ವೇಳೆ ರಾಘವೇಂದ್ರ ಮಠದ ಹತ್ತಿರ ಅಪರಿಚಿತನೊಬ್ಬ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾನೆ. ಆ ವ್ಯಕ್ತಿ ಹಿಂದುಗಡೆಯಿಂದ ಬಂದು ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ ಎಳೆದೊಯ್ದಿದ್ದಾನೆ.ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮುಂಬೈ ಮಹಾಮಳೆ ►125 ವರ್ಷದ ಹಳೆಯ ಕಟ್ಟಡ ಕುಸಿದು 10 ಜನರ ಮೃತ್ಯು

 

 

ಇನ್ನೊಂದು ಪ್ರಕರಣದಲ್ಲಿ ಗೀತಾ ಎಂಬವರು ಕದ್ರಿಯಲ್ಲಿರುವ ಸಂಬಂಧಿಕರ ಮನೆಯಿಂದ ಬುಧವಾರ ಸಂಜೆ ತನ್ನ ಮನೆಗೆ ಮರಳುತ್ತಿದ್ದಾಗ ಕೆಪಿಟಿ ಬಳಿಯ ಆರ್‌ಟಿಒ ಮೈದಾನ ಬಳಿ ವ್ಯಾಸನಗರದಲ್ಲಿರುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಲ್ಲಿ ಅಪರಿಚಿತ ವ್ಯಕ್ತಿ ಬೈಕ್ ನಿಲ್ಲಿಸಿ ರಿಪೇರಿ ಮಾಡುವಂತೆ ನಟಿಸುತ್ತಿದ್ದಾತ, ಇದ್ದಕ್ಕಿದ್ದಂತೆ ಗೀತಾರವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ಹಾಗೂ ಮತ್ತೊಂದು ಸರವನ್ನು ಸುಲಿಗೆ ಮಾಡಿ ಹೋಗಿದ್ದಾನೆ .ಈ ಬಗ್ಗೆ ಕದ್ರಿ ಠಾಣೆಯಲ್ಲಿಕೇಸ್ ದಾಖಲಾಗಿದೆ.

 

Xl

error: Content is protected !!
Scroll to Top