ಅಪೌಷ್ಠಿಕತೆಯಿಂದ ಬಳಲುತ್ತಿರುವ 10 ಸಾವಿರ ಮಕ್ಕಳಿಗೆ ಕೊಹ್ಲಿ ನೆರವು

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ . 19: ಅಪೌಷ್ಟಿಕತೆಯಿಂದ ಬಳಲುವ ದೇಶದ ಸುಮಾರು 10 ಸಾವಿರದಷ್ಟು ಮಕ್ಕಳಿಗೆ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಬೆಂಬಲವಾಗಿ ನಿಂತಿದ್ದಾರೆ.ಈ ಹಿಂದೆ ಪ್ರವಾಹಕ್ಕೀಡಾದವರಿಗೆ, ಕೋವಿಡ್​ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಿದ್ದ ಕಿಂಗ್​ ಕೊಹ್ಲಿ ಇದೀಗ ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಿಕೊಡುವ ಯೋಜನೆಗೆ ಮುಂದಾಗಿದ್ದಾರೆ.

ಅಪೌಷ್ಟಿಕತೆಯಿಂದ ಬಳಲುತ್ತಿರುವ 10 ಸಾವಿರ ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ನಿರ್ಧರಿಸಿದ್ದಾರೆ. ಸ್ಯಾನಿಟೇಷನ್(ವೈಜ್​)​ ಉತ್ಪನ್ನಗಳ ರಾಯಭಾರಿಯಾಗಿರುವ ವಿರಾಟ್ ಆ ಸಂಸ್ಥೆಯಿಂದ ಬರುವ ಲಾಭವನ್ನು ಬಡ ಮಕ್ಕಳ ಆಹಾರಕ್ಕೆ ನೀಡಲು ನಿರ್ಧರಿಸಿದ್ದಾರೆ. “ವೈಜ್​ ಪ್ರಾಡೊಕ್ಟ್​ಗಳಿಂದ ನಾನು ಗಳಿಸುವ ಆದಾಯವನ್ನು ಭಾರತದಲ್ಲಿ ಅಪೌಷ್ಠಿಕತೆಯ ವಿರುದ್ಧ ಹೋರಾಡುವ ಗುರಿಯನ್ನು ಹೊಂದಿರುವ ಈ ಉಪಕ್ರಮದ ಭಾಗವಾಗಲು ನನಗೆ ಸಂತೋಷವಾಗಿದೆ” ಎಂದು ಕೊಹ್ಲಿ ತಿಳಿಸಿದ್ದಾರೆ.

Also Read  ಪ್ರಧಾನ ಮಂತ್ರಿ ಆವಾಝ್ ಯೋಜನೆ- ಫೆಬ್ರವರಿ 28 ರಂದು ಫಲಾನುಭವಿಗಳ ಸಭೆ

 

error: Content is protected !!
Scroll to Top