ಮುಲ್ಕಿ: ಸ್ಪೋರ್ಟ್ಸ್ ಕ್ಲಬ್ ನಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್-19 ಉಚಿತ ಪರೀಕ್ಷಾ ಶಿಬಿರ

(ನ್ಯೂಸ್ ಕಡಬ) newskadaba.com ತೋಕೂರು ನ. 19: ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ,ನೆಹರು ಯುವ ಕೇಂದ್ರ ಮಂಗಳೂರು,ಯುವ ಸಬಲೀಕರಣ ಮತ್ತು ದ.ಕ. ಜಿಲ್ಲಾ ಕ್ರೀಡಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಆಡಳಿತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಡುಪಣಂಬೂರು ಗ್ರಾಪಂ, ದ.ಕ. ಜಿಲ್ಲಾ ಯುವಜನ ಒಕ್ಕೂಟ ಮಾರ್ಗದರ್ಶನದಲ್ಲಿ ಪ್ರಾ.ಆ. ಕೇಂದ್ರ ಅತ್ತೂರು, ಕೆಮ್ರಾಲ್ ಸಂಯೋಜನೆಯಲ್ಲಿ ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಹಳೆಯಂಗಡಿ ತೋಕೂರು ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು ಸಹಕಾರದಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್-19 ಉಚಿತ ಪರೀಕ್ಷಾ ಶಿಬಿರ ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.

ತೋಕೂರು,ಬೆಳ್ಳಾಯರು,ಕೊಯಿಕುಡೆ ಗ್ರಾಮದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕೋವಿಡ್ ಪರೀಕ್ಷೆಯ ಸದುಪಯೋಗ ಪಡೆದುಕೊಂಡರು. ಅತ್ತೂರು, ಕೆಮ್ರಾಲ್ ನ ಪ್ರಾ.ಆ.ಕೇಂದ್ರ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಮಾರ್ಗರೇಟ್ ಸುದರ್ಶಿನಿ ಉಪಸ್ಥಿತಿಯಲ್ಲಿ ಕೋವಿಡ್ ಪರೀಕ್ಷೆ ಜರುಗಿತು. ಆರೋಗ್ಯ ಇಲಾಖೆಯ ಕರುಣಾಕರ ಕೋವಿಡ್ ತಪಾಸಣೆ ನಡೆಸಿ ಕೊಟ್ಟರು. ಆಶಾ ಕಾರ್ಯಕರ್ತೆಯರಾದ ಯಶೋದಾ ದೇವಾಡಿಗ, ಲತಾ, ಸ್ಪೋರ್ಟ್ಸ್ ಕ್ಲಬ್ ನ ಸಾಂಸ್ಕೃತಿಕ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಬೇಕಲ್, ಸದಸ್ಯರಾದ ಶಂಕರ್ ಪೂಜಾರಿ, ಮಹಿಳಾ ಸಮಿತಿಯ ಸದಸ್ಯರಾದ ಶೈಲಾ ನವೀನ್ ಶೆಟ್ಟಿಗಾರ್ , ಹೇಮಾ ನಾಗಪ್ಪ ಮತ್ತಿತರರು ಪಾಲ್ಗೊಂಡಿದ್ದರು.

Also Read  ಕಾಂಗ್ರೆಸ್‌ನ ಯು.ಟಿ.ಖಾದರ್ 9366 ಮತಗಳ ಅಂತರದಿಂದ ಮುನ್ನಡೆ

error: Content is protected !!
Scroll to Top