ಹಿರಿಯ ಪತ್ರಕರ್ತ, ರಂಗಕರ್ಮಿ ಕೆ.ಆರ್. ಪ್ರಕಾಶ್ ನಿಧನ

(ನ್ಯೂಸ್ ಕಡಬ) newskadaba.com ಶಿರಸಿ ನ. 19: ಹಿರಿಯ ಪತ್ರಕರ್ತ, ನಾಟಕಕಾರ ಹಾಗೂ ನಾಟಕ ಅಕಾಡೆಮಿ ಸದಸ್ಯರಾಗಿದ್ದ ಕೆ.ಆರ್. ಪ್ರಕಾಶ್ (50) ಅನಾರೋಗ್ಯದಿಂದ ಬುಧವಾರ ತಡ ರಾತ್ರಿ ನಿಧನ ಹೊಂದಿದರು. ಯಲ್ಲಾಪುರ ತಾಲೂಕಿನ ಹೆಮ್ಮಾಡಿ ಸಮೀಪದ ಕಾನಕೊಡ್ಲು ಮೂಲದವರಾದ ಅವರು ಶಿರಸಿಯಲ್ಲಿ ಬಹುಕಾಲ ವರದಿಗಾರರಾಗಿದ್ದರು.

ನಾಟಕಗಳಲ್ಲಿ ನಟನೆ, ರಚನೆ ಹಾಗೂ ನಿರ್ದೇಶನದಲ್ಲಿ ಪ್ರಸಿದ್ಧರಾಗಿದ್ದರು. ಪ್ರಪಾತ, ಕೆರೆ ಸೇರಿದಂತೆ ನಿಸರ್ಗ ಮಧ್ಯದಲ್ಲಿ ನಾಟಕದಂಥ ಹೊಸ ಪ್ರಯೋಗ ಮಾಡಿ ಯಶಸ್ಸು ಕಂಡಿದ್ದರು. ಕಳೆದ ಒಂದು ವರ್ಷದಿಂದ ನಾಟಕ ಅಕಾಡೆಮಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತರಿಗೆ ಪತ್ನಿ, ಪುತ್ರ ಅಪಾರ ಬಂಧುಗಳಿದ್ದಾರೆ.

Also Read  ಐವರ್ನಾಡು: ಜೂನಿಯರ್ ಕಾಲೇಜಿನ ಆವರಣದ ಕಂಪೌಂಡು ಗೋಡೆ ಕುಸಿತ

error: Content is protected !!
Scroll to Top