ಉಡುಪಿ: ಅಮಾನವೀಯ ರೀತಿಯಲ್ಲಿ ಗಂಡು ಕರುವಿನ ಸಾಗಾಟಕ್ಕೆ ಯತ್ನ…!

(ನ್ಯೂಸ್ ಕಡಬ) newskadaba.com ಉಡುಪಿ, . 19. ಕಳೆದ ದಿನ ಕಾಪು ತಾಲೂಕಿನ ಮಜೂರು ಚಂದ್ರ ನಗರದಲ್ಲಿ ಅಮಾನವೀಯ ರೀತಿಯಲ್ಲಿ ರಟ್ಟಿನ ಪಟ್ಟಿಗೆಯೊಳಗೆ ಜೀವಂತ ಗಂಡು ಕರುವನ್ನು ಎಸೆದು ಹೋದ ಘಟನೆ ನಡೆದಿದೆ.

 

 

ಸಾರ್ವಜನಿಕರು ರಟ್ಟಿನ ಪೆಟ್ಟಿಗೆ ಅಲ್ಲಡುತ್ತಿರುವುದನ್ನು ಗಮನಿಸಿದ್ದು, ತಕ್ಷಣ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂದೀ ಪ್ ರಾವ್ ಅವರಿಗೆ ದೂರವಾಣಿ ಕರೆ ಮಾಡುವ ಮೂಲಕ ತಿಳಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು ಹಾಗೂ ಸಾರ್ವಜನಿಕರು ಆಪೆಟ್ಟಿಗೆಯನ್ನು ಬಿಡಿಸಿ ನೋಡಿದ್ದಾರೆ. ಈ ಸಂದರ್ಭದಲ್ಲಿ ಜೀವಸ್ಮರಣ ಸ್ಥಿತಿಯಲ್ಲಿ ದನದ ಕರುವೊಂದು ಕಂಡು ಬಂದಿದ್ದು, ಕರುವನ್ನು ತುರ್ತಾಗಿ ಸ್ಥಳೀಯ ಪಶು ವೈದ್ಯರಲ್ಲಿಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಇದೀಗ ಔಷಧಿಗೆ ಸ್ಪಂದಿಸಿದ ಕರು ಗುಣಮುಖವಾಗುತ್ತಿದೆ. ಕರುವನ್ನು ನಾವು ರಕ್ಷಿಸಿದ್ದು, ನಮಗೆ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಕರುವನ್ನು ಕಳುಹಿಸಿ ಕೊಡುವುದಾಗಿ ಹೇಳಿದ್ದಾರೆ.

Also Read  ರೀಲ್ಸ್ ಗಾಗಿ ನಡುರಸ್ತೆಯಲ್ಲೇ ಪೆಟ್ರೋಲ್ ಬಾಂಬ್ ಸ್ಫೋಟಿಸಿ ಹುಚ್ಚಾಟ ಮೆರೆದ ವಿದ್ಯಾರ್ಥಿಗಳು

 

error: Content is protected !!
Scroll to Top