ಮಂಗಳೂರು: ಏರ್ ಪೋರ್ಟ್ ಪ್ರವೇಶ ದ್ವಾರ ಬಳಿ ‘ಕೈ’ ಕಾರ್ಯಕರ್ತರ ಮುತ್ತಿಗೆ ಯತ್ನ

(ನ್ಯೂಸ್ ಕಡಬ) newskadaba.com ಮಂಗಳೂರು . 19: ಮಂಗಳೂರು ಅಂ‌ತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ “ಕೋಟಿ-ಚೆನ್ನಯ” ಹೆಸರಿಡುವಂತೆ ಆಗ್ರಹಿಸಿ ಕಾಂಗ್ರೆಸ್ ನಡೆಸಿದ ಪಂಜಿನ ಮೆರವಣಿಗೆ ವಿಮಾನ ನಿಲ್ದಾಣ ಪ್ರವೇಶ ದ್ವಾರವಿರುವ ಬಜ್ಪೆಯ ಕೆಂಜಾರು ಬಳಿ ಸಮಾಪ್ತಿಗೊಂಡಿತು. ಈ ವೇಳೆ ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಒಂದು ಬದಿಯ ರಸ್ತೆಯನ್ನು ತಡೆದು ಪ್ರತಿಭಟಿಸಿದ ಕಾರ್ಯಕರ್ತರು, ಅದಾನಿ ಕಂಪೆನಿಯ ನಾಮಕರಣಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

 

ಈ ಸಂದರ್ಭ ಪ್ರವೇಶ ದ್ವಾರದ ಬಳಿ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಕಾಂಗ್ರೆಸ್ ನಾಯಕರೇ ತಡೆದು ನಿಲ್ಲಿಸಿದರು. ಈ ಸಂದರ್ಭ ಮಾತನಾಡಿದ ದ.ಕ. ಯೂತ್ ಕಾಂಗ್ರೆಸ್ ಅಧ್ಯಕ್ಷ‌ ಮಿಥುನ್ ರೈ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಸಿದ್ಧರಾಗುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

Also Read  ಮಾಣಿ : ಕೋಕ್ ಸಾಗಾಟದ ಲಾರಿ ಪಲ್ಟಿ - ಕಳಪೆ ಗುಣಮಟ್ಟದ ತಾತ್ಕಾಲಿಕ ರಸ್ತೆಯಿಂದ ಹೆಚ್ಚುತ್ತಿರುವ ಅಪಘಾತಗಳು

 

Xl

error: Content is protected !!
Scroll to Top