ಕಡಬ: ಐತ್ತೂರು ಗ್ರಾ.ಪಂ. ಕಛೇರಿಯ ಹಿರಿಯ ಸಿಬ್ಬಂದಿಗೆ ಹಲ್ಲೆ

(ನ್ಯೂಸ್ ಕಡಬ) newskadaba.com ಕಡಬ, ನ. 18. ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ಗಣನಾಥ ಎಂಬವರು ಕಛೇರಿಯಲ್ಲಿ ದಾಂಧಲೆ ನಡೆಸಿ ಹಿರಿಯ ಸಿಬ್ಬಂದಿ ಶಿಬು ಎಂಬವರಿಗೆ ಹೊಡೆದ ಘಟನೆ ಐತ್ತೂರು ಗ್ರಾಮ ಪಂಚಾಯತ್ ನಲ್ಲಿ ಇಂದು ಮಧ್ಯಾಹ್ನ ನಡೆದಿದೆ.

Xl

ಗಣನಾಥ ಎಂಬವರು ಕ್ಷುಲ್ಲಕ ಕಾರಣಕ್ಕೆ ಹಿರಿಯ ಸಿಬ್ಬಂದಿ ಬಿಲ್ ಕಲೆಕ್ಟರ್ ಶಿಬು ಎಂಬವರಿಗೆ ಹೊಡೆದಿದ್ದಾರೆ ಎನ್ನಲಾಗಿದೆ. ಇವರು ಕಛೇರಿಗೆ ಭೇಟಿ ನೀಡಿದ ಸಾರ್ವಜನಿಕರ ಜೊತೆ ಸರಿಯಾಗಿ ವ್ಯವಹರಿಸದೇ ಹಾಗೂ ಕಛೇರಿಗೆ ಸಮಯಕ್ಕನುಸಾರ ಬಾರದೇ ಕಾಲಹರಣ ಮಾಡುತ್ತಿದ್ದುದ್ದರಿಂದ ಕೆಲಸದಿಂದ ತೆಗೆದು ಹಾಕುವುದಾಗಿ ಈ ಹಿಂದೆ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಇದೀಗ ಆತ ಹಲ್ಲೆ ನಡೆಸಿರುವ ಫೋಟೋ ವೈರಲ್ ಆಗಿದೆ.

Also Read  ರಾಜ್ಯದ ಹೊಸ ಕೊರೊನಾ ಕೇಸ್‌ 5 ಸಾವಿರಕ್ಕೆ ಇಳಿಕೆ

error: Content is protected !!
Scroll to Top