ಮಲ್ಪೆ: ಮಹಿಳೆಯ ಚಿನ್ನದ ಸರ ಕದ್ದೊಯ್ದು ಪರಾರಿ

(ನ್ಯೂಸ್ ಕಡಬ) newskadaba.com ಮಲ್ಪೆ, ನ. 19:  ಮೀನು ಮಾರಾಟ ಮಾಡುವುದಕ್ಕಾಗಿ ಮನೆಯಿಂದ ಪಡುಕೆರೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅಪರಿಚಿತನೋರ್ವ ಸ್ಕೂಟರ್ ನಲ್ಲಿ ಹಿಂದಿನಿಂದ ಬಂದು ಕುತ್ತಿಗೆಗೆ ಕೈ ಹಾಕಿ ಅವರನ್ನು ದೂಡಿ ಹಾಕಿ ಚಿನ್ನದ ಸರವನ್ನು ಕದ್ದೊಯ್ದಿರುವ ಘಟನೆ ನಡೆದಿದೆ.

 

ಮಹಿಳೆಯನ್ನು ಪಡುಕೆರೆ ಕಿದಿಯೂರು ನಿವಾಸಿ ಯಮುನಾ(65) ಎಂದು ಗುರುತಿಸಲಾಗಿದೆ. ಸುಮಾರು 1.19 ಲಕ್ಷ ಮೌಲ್ಯದ ಐದೂವರೆ ಪವನ್ ತೂಕದ ಚಿನ್ನದ ಆಭರಣವೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ ಗಳಲ್ಲಿ ಉಪ ಚುಣಾವಣೆಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗರೂಕತಾ ಕ್ರಮ : ನಿಷೇಧಾಜ್ಷೆ

 

Xl

 

error: Content is protected !!
Scroll to Top