ಸ್ಕಾಲರ್ ಶಿಪ್ ಮಂಜೂರಾತಿಯಲ್ಲಿ ವಿಳಂಬ ಮತ್ತು ಪಿ.ಹೆಚ್.ಡಿ, ಎಮ್.ಫಿಲ್ ಫೆಲೋಶಿಪ್ ಕಡಿತಗೊಳಿಸಿರುವ ವಿರುದ್ಧ ಸಿಎಫ್ಐ ವತಿಯಿಂದ “ಸ್ಕಾಲರ್ ಶಿಪ್ ಕೊಡಿ” ವಿದ್ಯಾರ್ಥಿ ಆಂದೋಲನದ ಘೋಷಣೆ

(ನ್ಯೂಸ್ ಕಡಬ) newskadaba.com ಪ್ರಸಕ್ತ ಶ್ಯಕ್ಷಣಿಕ ವರ್ಷದ ಶಾಲಾ ಕಾಲೇಜುಗಳು ಇನ್ನೇನು ಆರಂಭಗೊಳ್ಳಲಿದೆ. ಕೊರೋನಾದ ಪರಿಣಾಮದಿಂದ ಜನರ ಆರ್ಥಿಕ ಸ್ಥಿತಿಗತಿಯು ತೀರಾ ಹದಗೆಟ್ಟಿರುವುದರಿಂದ  ಪೋಷಕರು ತಮ್ಮ ಮಕ್ಕಳ ಅಡ್ಮಿಷನ್ ಫೀಸ್ ಕಟ್ಟಲು ಪರದಾಡುತ್ತಿದ್ದಾರೆ. ಇನ್ನೊಂದು ಕಡೆ ಶಿಕ್ಷಣ ಸಂಸ್ಥೆಗಳು ಕೂಡಾ ಅಡ್ಮಿಶನ್ ಫೀಸ್ ಹೆಚ್ಚಿಸಿರುವುದಲ್ಲದೇ ಒಂದೇ ಕಂತಿನಲ್ಲಿ ಎಲ್ಲಾ ಶುಲ್ಕವನ್ನು ಕಟ್ಟಲು ಒತ್ತಾಯಿಸುವ ಮೂಲಕ ಪೋಷಕರಿಗೆ ಗಾಯದ ಮೇಲೆ ಬರೆ ಎಳೆದಿದ್ದಾರೆ. ಸರಕಾರವು ಕೂಡಾ ಬಗ್ಗೆ ಒಂದು  ಮಾರ್ಗಸೂಚಿಯನ್ನು ತರಲು ವಿಫಲವಾಗಿರುವುದು ವಿಪರ್ಯಾಸವೇ ಸರಿ. ಸದ್ಯದ ಪರಿಸ್ಥಿತಿಯಲ್ಲಿ ವಿಧ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರೆಸಲು ಸ್ಕಾಲರ್‌ ಶಿಪ್‌ ಗೆ ಅವಲಂಬಿತವಾಗಿದ್ದಾರೆ. ಆದರೆ ಸ್ಕಾಲರ್‌ ಶಿಪ್‌ ನಲ್ಲಿ ಉಂಟಾಗಿರುವ ಅವ್ಯವಸ್ಥೆಯಿಂದ ರಾಜ್ಯದ ಹಲವು ವಿಧ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ. ಪ್ರತಿ ಬಾರಿ ಸರಕಾರ ಮತ್ತು ಅಲ್ಪಸಂಖ್ಯಾತ  ಇಲಾಖೆಯು ಸ್ಕಾಲರ್‌ ಶಿಪ್ ವಿಚಾರದಲ್ಲಿ ವ್ಯವಸ್ಥಿತವಾಗಿ ನಡೆಸಿಕೊಂಡು ಬರುವುದರಲ್ಲಿ ವಿಫಲವಾಗುತ್ತಿದ್ದು, ಇದು ಶಿಕ್ಷಕರ ಮತ್ತು ವಿಧ್ಯಾರ್ಥಿಗಳ ಮೇಲೆ ಸರಕಾರಕ್ಕಿರುವ ಬೇಜವಾಬ್ದಾರಿತನವಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಆರೋಪಿಸುತ್ತಿದೆ.

ಅಲ್ಪಸಂಖ್ಯಾತ  ವಿಧ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರಿ-ಮೆಟ್ರಿಕ್, ಪೋಸ್ಟ್ ಮೆಟ್ರಿಕ್, ವಿದ್ಯಾಸಿರಿ, ಅರಿವು ಸಾಲ ಮುಂತಾದ ಸ್ಕಾಲರ್‌ ಶಿಪ್ ಯೋಜನೆಯನ್ನು ಪ್ರಕಟಿಸಿದೆ. ಆದರೆ ಕಳೆದ  ವರ್ಷಗಳಿಂದ ಅರ್ಜಿ ಹಾಕಿರುವ ವಿಧ್ಯಾರ್ಥಿಗಳಿಗೆ ಇಲಾಖೆಯು ಕ್ಷುಲ್ಲಕ ಕಾರಣಗಳನ್ನು ಹೇಳಿ ತಮ್ಮ ಅರ್ಜಿಗಳನ್ನು ವಿಲೇವಾರಿ ಮಾಡದೇ ಬಾಕಿಯಿಟ್ಟಿವೆ. ಇನ್ನು ಕೆಲವರಿಗೆ ಸ್ಕಾಲರ್‌ ಶಿಪ್ ಮಂಜೂರಾದರೂ ತಮ್ಮ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಲ್ಲ. ವಿಧ್ಯಾರ್ಥಿಗಳು ಬಗ್ಗೆ ವಿಚಾರಿಸಲು ಅಲ್ಪಸಂಖ್ಯಾತ ಇಲಾಖೆಯ ರಾಜ್ಯ ಮತ್ತು ಜಿಲ್ಲಾ ಕಛೇರಿಗಳಿಗೆ ಅಲೆದಾಡುತ್ತಿದ್ದಾರೆ. ಇತ್ತ ಶಿಕ್ಷಣ ಸಂಸ್ಥೆಗಳು ಕಳೆದ ಸಾಲಿನ ಬಾಕಿಯಿರುವ ದಾಖಲಾತಿ ಶುಲ್ಕವನ್ನು ಕಟ್ಟದೆ ಪ್ರಸಕ್ತ 2020-21 ದಾಖಲಾತಿ ಮಾಡುತ್ತಿಲ್ಲ.  ವಿಧ್ಯಾರ್ಥಿಗಳು ಶುಲ್ಕವನ್ನು ಕಟ್ಟಲು ಇದೇ ಸ್ಕಾಲರ್‌ಶಿಪ್‌ ನ್ನು ನಿರೀಕ್ಷಿಸುತ್ತಿದ್ದಾರೆ. ರಾಜ್ಯ ಸರಕಾರವು ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದ್ದು, ಕನಿಷ್ಟ ಅಲ್ಪಸಂಖ್ಯಾತ ಇಲಾಖೆಗೆ ಪ್ರತ್ಯೇಕ ಸಚಿವರನ್ನು ಕೂಡ ಇದುವರೆಗೆ ನೇಮಿಸಿಲ್ಲ. ಅಲ್ಲದೆ ಸ್ಕಾಲರ್‌ ಶಿಪ್ ಗೆ ಅರ್ಜಿ ಹಾಕುವ ಸಂದರ್ಭದಲ್ಲಿ ಉಂಟಾಗುವ ತಾಂತ್ರಿಕ ತೊಂದರೆಯನ್ನು ಇದುವರೆಗೆ ಸರಿಪಡಿಸಿಲ್ಲ. ಇದರಿಂದ ಪ್ರತಿ ವರ್ಷ ಹಲವು ವಿಧ್ಯಾರ್ಥಿಗಳು ಸ್ಕಾಲರ್‌ ಶಿಪ್‌ ನಿಂದ ವಂಚಿತರಾಗುತ್ತಿದ್ದಾರೆ. ಸರಕಾರದ ಧೋರಣೆಯನ್ನು ಕ್ಯಾಂಪಸ್ ಫ್ರಂಟ್ ಆಫ್  ಕಟು ಶಬ್ಧಗಳಿಂದ ಖಂಡಿಸುತ್ತಿದೆ.

Also Read  ಅ.28ರಂದು ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪ್ರದಾನ

 

ಕಡಿತಗೊಳಿಸಿರುವ ಅಲ್ಪಸಂಖ್ಯಾತ ಇಲಾಖೆಯ ಪಿ.ಹೆಚ್.ಡಿ ಮತ್ತು ಎಮ್.ಫಿಲ್ ಫೆಲೋಶಿಪ್ ಮುಂದುವರೆಸಿ

 

ಅಲ್ಪಸಂಖ್ಯಾತ ಇಲಾಖೆಯಿಂದ ಪಿ.ಹೆಚ್.ಡಿ ಮತ್ತು ಎಮ್.ಫಿಲ್ ಅಧ್ಯಯನ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ಪ್ರತೀ ವರ್ಷ ಮಾಸಿಕ 25,000 ಪ್ರೋತ್ಸಾಹಧನ ಮತ್ತು ವಾರ್ಷಿಕ 10,000 ನಿರ್ವಹಣ ವೆಚ್ಚವನ್ನು ನೀಡುತ್ತಿತ್ತು. ಆದರೆ ಸರಕಾರ ದಿಢೀರ್ ಆದೇಶ ಹೊರಡಿಸಿ ಮಾಸಿಕ ನೀಡುವ ಪ್ರೊತ್ಸಾಹಧನವನ್ನು 10,000 ಕ್ಕೆ ಇಳಿಸಿ ಮತ್ತು ವಾರ್ಷಿಕ ನಿರ್ವಹಣಾ ವೆಚ್ಚವನ್ನು ಹಿಂತೆಗೆದಿದೆ. ಸರಕಾರ ವಿನಾಃ ಕಾರಣ ಹೊರಡಿಸಿರುವ ಆದೇಶವು ವಿಧ್ಯಾರ್ಥಿಗಳ ಭವಿಷ್ಯದಲ್ಲಿ ಪರಿಣಾಮ ಬಿದ್ದಿದೆ. ಸರಕಾರದ ನಿರ್ಧಾರದಲ್ಲಿ ಹಲವು ದುರುದ್ಧೇಶಗಳಿದ್ದು, ಕೊರೋನಾದ ಸಂಕಷ್ಟದ ಸಂಧರ್ಭದಲ್ಲಿಯೂ ಇಂತಹ ನಿರ್ಧಾರ ಕೈಗೊಂಡಿರುವುದಕ್ಕೆ ಕ್ಯಾಂಪಸ್ ಫ್ರಂಟ್ ಖಂಡಿಸುತ್ತಿದೆ. ಅಲ್ಲದೇ ಕೂಡಲೇ ಕಡಿತಗೊಳಿಸಿರುವ ಪಿ.ಹೆಚ್.ಡಿ ಮತ್ತು ಎಮ್.ಫಿಲ್ ಫೆಲೋಶಿಪ್ ಮುಂದುವರೆಸಬೇಕೆಂದು ಆಗ್ರಹಿಸುತ್ತಿದೆ.

Also Read  ಪೋಲೀಸರ ಕಿರುಕುಳ ತಾಳಲಾರದೆ ಯುವಕ ನೇಣಿಗೆ ಶರಣು

 

ಒಟ್ಟಾರೆಯಾಗಿ ಅಲ್ಪಸಂಖ್ಯಾತ ಇಲಾಖೆಯಲ್ಲಿ ಉಂಟಾಗಿರುವ ಎಲ್ಲಾ ಅವ್ಯವಸ್ಥೆಗಳ ವಿರುದ್ಧ ವಿಧ್ಯಾರ್ಥಿಗಳು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಹಲವು ಬಾರಿ ಅಧಿಕಾರಿಗಳನ್ನು ಭೇಟಿಯಾದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಪದೇ ಪದೇ ಸ್ಕಾಲರ್‌ ಶಿಪ್ ವಿಚಾರದಲ್ಲಿ ಉಂಟಾಗುತ್ತಿರುವ ಇಂತಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿಕೊಂಡು ಇದಕ್ಕೆ ಶಾಸ್ವತ ಪರಿಹಾರ ಕಾಣುವ ನಿಟ್ಟಿನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿಯು ಕರ್ನಾಟಕ ರಾಜ್ಯಾದ್ಯಂತ ‘ಸ್ಕಾಲರ್ ಶಿಪ್ ಕೊಡಿ’ ರಾಜ್ಯ ವ್ಯಾಪಿ ವಿಧ್ಯಾರ್ಥಿ ಆಂದೋಲನವನ್ನು ನಡೆಸಲು ನಿರ್ಧರಿಸಿದೆ. ಆಂದೋಲನದಲ್ಲಿ ವಿವಿಧ ರೀತಿಯ ಹೋರಾಟ ರೂಪುಗೊಳ್ಳಲಿದ್ದು, ವಿಧ್ಯಾರ್ಥಿಗಳು, ಸಾರ್ವಜನಿಕರು ಮತ್ತು ಪೋಷಕರು ಆಂದೋಲನದಲ್ಲಿ ಕೈ ಜೋಡಿಸುವಂತೆ ಪತ್ರಿಕಾ ಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ರಾಜ್ ಕಾರ್ಯದರ್ಶಿ ಅಶ್ವಾನ್ ಸಾದಿಕ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಅಶ್ರಫ್ ದಾವಣಗೆರೆ, ಶಿವಮೊಗ್ಗ ಜಿಲ್ಲಾಧ್ಯಕ್ಷ ಮುಜಾಹಿದ್ ಉಪಸ್ಥಿತರಿದ್ದರು.

ಪ್ರಮುಖ ಬೇಡಿಕೆಗಳು

  • ಸ್ಕಾಲರ್‌ಶಿಪ್ ವ್ಯವಸ್ಥೆಯನ್ನು ಸರಳೀಕೃತಗೊಳಿಸಿ
  • ಬಾಕಿ ಇರುವ ಅರ್ಜಿಯನ್ನು ಶೀಘ್ರ ವಿಲೇವಾರಿ ಮಾಡಬೇಕು
  • ಮಂಜೂರಾಗದೇ ಬಾಕಿಯಿರುವ ಎಲ್ಲಾ ಮಾದರಿಯ ವಿಧ್ಯಾರ್ಥಿ ವೇತನವನ್ನು ಶೀಘ್ರ ಬಿಡುಗಡೆಗೊಳಿಸಿ
  • ಕಡಿತಗೊಳಿಸಿರುವ ಪಿ.ಹೆಚ್.ಡಿ ಫೆಲೋಶಿಪ್ ಆದೇಶವನ್ನು ಹಿಂಪಡೆಯಬೇಕು.
  • ದುರುಪಯೋಗವಾಗುತ್ತಿರುವ ವಿಧ್ಯಾರ್ಥಿ ವೇತನದ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕು.
Also Read  ಬಸ್ ಅಪಘಾತ ➤ಓರ್ವ ಮಹಿಳೆ ಬಲಿ …!!!!

error: Content is protected !!
Scroll to Top