ಸುರತ್ಕಲ್: ಪ್ರಿಯತಮೆಯ ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಹೂವಿನ ವ್ಯಾಪಾರಿ…!



(ನ್ಯೂಸ್ ಕಡಬ) newskadaba.com ಸುರತ್ಕಲ್, ನ. 18. ಹೂವಿನ ವ್ಯಾಪಾರಿಯೊಬ್ಬ ತನ್ನ ಪಿಯತಮೆಯನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ನಲ್ಲಿ ಇಂದು ನಡೆದಿದೆ.





 

 

ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಕುಳಾಯಿ ನಿವಾಸಿ ವಸಂತ್(44) ಎಂದು ಗುರುತಿಸಲಾಗಿದೆ. ಕಳೆದ ಏಳೆಂಟು ವರ್ಷಗಳಿಂದ ಹೂವು ವ್ಯಾಪಾರ ಮಾಡುತ್ತಿದ್ದ ಈತನ ಅಂಗಡಿಗೆ ಹೂವು ಕೊಳ್ಳಲು ಬರುತ್ತಿದ್ದ ಸೂರಿಂಜೆಯ ವಿವಾಹಿತ ಮಹಿಳೆಯೋರ್ವರ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ. ಆದರೆ ಈತನಿಗೆ ದ್ವೇಷ್ಯ ಇದ್ದ ಕಾರಣ ಮಹಿಳೆಯನ್ನೂ ಕೊಂದು ಬಳಿಕ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.






 

Xl

 

error: Content is protected !!
Scroll to Top