ಸುಳ್ಯ: ಪ್ರಜ್ಞಾ ಆಶ್ರಮದಲ್ಲಿ ಜ್ಞಾನದೀಪ ಸಂಸ್ಥೆಯಿಂದ ದೀಪಾವಳಿ ಆಚರಣೆ

(ನ್ಯೂಸ್ ಕಡಬ) newskadaba.com ಸುಳ್ಯ ನ. 18: ನಾಡಿನೆಲ್ಲೆಡೆ ಹಬ್ಬದ ಸಂಭ್ರಮ ಮೇಳೈಸುತ್ತಿದ್ದರೆ ಪುತ್ತೂರು ಸಮೀಪದ ಕರ್ಮಲ ಬನ್ನೂರಿನ ಪ್ರಜ್ಞಾ ವಿಕಚೇತನರ ಪುನರ್ವಸತಿ ಕೇಂದ್ರದ ಆಶ್ರಮದಲ್ಲಿ ಸುಳ್ಯ ಮತ್ತು ಬೆಳ್ಳಾರೆಯಲ್ಲಿ ಕಾರ್ಯರ್ವಹಿಸುತ್ತಿರುವ ಜ್ಞಾನದೀಪ ಶಿಕ್ಷಣ, ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯ ವತಿಯಿಂದ ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಣೆ ನಡೆಯಿತು.

ಬರ್ನೂರು ಕರ್ಮಲದ ಬಾಡಿಗೆ ಮನೆಯೊಂದರಲ್ಲಿ ನಾಲ್ಕು ವರ್ಷಗಳಿಂದ 12 ಮಂದಿ ಮಾನಸಿಕ ವಿಕಲಚೇತನರನ್ನು ಸಲಹಿ ಅವರ ಬದುಕಿಗೆ ಬೆಳಕು ತೋರುತ್ತಿರುವ ಪ್ರಜ್ಞಾ ಆಶ್ರಮದಲ್ಲಿ ಬುಧವಾರ ಹಬ್ಬದ ವಾತಾವರಣ ಕಲೆಕಟ್ಟಿತ್ತು. ದೀಪಾವಳಿಯ ವಿಶಿಷ್ಟ ರೀತಿಯ ಆಚರಣೆ ಇಲ್ಲ್ಲಿ ನಡೆಯಿತು. ಜ್ಞಾನದೀಪ ಸಂಸ್ಥೆಯ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿಯರು ಹಾಗೂ ಸಿಬಂದಿಗಳು ಆಶ್ರಮವಾಸಿಗಳ ಜೊತೆ ಬೆರೆತು ದೀಪಾವಳಿ ಆಚರಿಸಿದರು. ರಂಗೋಲಿ ಬಿಡಿಸಿ, ಹಣತೆ ಹಚ್ಚಿದರು. ಆಶ್ರಮದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಅಣ್ಣಪ್ಪ ಮತ್ತು ಜ್ಯೋತಿ ದಂಪತಿಯನ್ನು ಜ್ಞಾನದೀಪ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

Also Read  ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ - ಇಡೀ ದಿನ ಧೂಳು ತಿಂದು ಹೈರಾಣಾಗುತ್ತಿರುವ ಪರಿಸರ ನಿವಾಸಿಗಳು

error: Content is protected !!
Scroll to Top