ಯುವತಿಯ ಮೇಲೆ ಅತ್ಯಾಚಾರ ಪ್ರಕರಣ ➤ ಸಬ್ ಇನ್ ಸ್ಪೆಕ್ಟರ್ ಅಮಾನತು…!

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 18:  ಚಾಮರಾಜಪೇಟೆ ಠಾಣೆಯ ಸಬ್ ಇನ್‍ಸ್ಪೆಕ್ಟರೊಬ್ಬರು(ಪಿಎಸ್‍ಐ) ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವ ಇವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಅಮಾನತು ಮಾಡಿದ ಸಬ್ ಇನ್ಸ್‍ಪೆಕ್ಟರ್ ನ್ನು ವಿಶ್ವನಾಥ್ ಬಿರಾದಾರ ರಂದು ಗುರುತಿಸಲಾಗಿದೆ.

 

 

 

ವಿಶ್ವನಾಥ ಹಾಗೂ ಬೆಂಗಳೂರಿನ 30 ವರ್ಷದ ಯುವತಿ ನಡುವೆ ಸ್ನೇಹ ಏರ್ಪಟ್ಟಿತ್ತು. ಯುವತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನನ್ನನ್ನು ಬೆದರಿಸುತ್ತಿದ್ದಾಳೆ ಎಂದು ವಿಶ್ವನಾಥ್ ಯುವತಿ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಇದಕ್ಕೆ ತಕ್ಕಂತೆ ದೂರು ನೀಡಿದ್ದ ಯುವತಿ, ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದ ವಿಶ್ವನಾಥ್ ಧರ್ಮಸ್ಥಳಕ್ಕೆ ಕರೆದೊಯ್ದು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದಾಳೆ. ಪ್ರರಣದ ಬಗ್ಗೆ ದ.ಕ ಜಿಲ್ಲಾ ಪೊಲೀಸ್ ಎಸ್ಪಿ, ನಗರ ಪೊಲೀಸ್ ಕಮಿಷನರ್ ಅವರಿಗೆ ವರದಿ ಕಳುಹಿಸಿದ್ದರು. ಇದನ್ನು ಆಧರಿಸಿ ವಿಶ್ವನಾಥ್ ಬಿರಾದಾರ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

Also Read  ಸುಳ್ಯ:ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

 

Xl

 

error: Content is protected !!
Scroll to Top