ಸಮರ್ಪಕ ವಿದ್ಯುತ್ ಸರಬರಾಜು ಮಾಡುವಂತೆ ಸಾರ್ವಜನಿಕರಿಂದ ಮನವಿ

(ನ್ಯೂಸ್ ಕಡಬ) newskadaba.com ಪುತ್ತೂರು, . 18. ಸಮರ್ಪಕ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಹಲವು ಮನೆಗಳ ಗೃಹೋಪಯೋಗಿ ವಿದ್ಯುತ್ ವಸ್ತುಗಳು ಹಾಳಾಗಿ, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಕೆಮ್ಮಿಂಜೆ ಗ್ರಾಮದ ಪುದುಕೋಳಿ ಪರಿಸರದ ನಾಗರಿಕರು ಮೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಸಮರ್ಪಕ ವಿದ್ಯುತ್ ಸರಬರಾಜು ಮಾಡುವಂತೆ ಮೆಸ್ಕಾಂ ಇಂಜಿನಿಯರ್ ರಾಮಚಂದ್ರ ಅವರಿಗೆ ಮನವಿ ಮಾಡಿದ್ದಾರೆ.

 

ಪುತ್ತೂರು ಮೂಲೆಯಲ್ಲಿರುವ ವಿದ್ಯುತ್ ಪರಿವರ್ತಕದಿಂದ ವಿದ್ಯುತ್ ಸರಬರಾಜು ಆಗುತ್ತಿದ್ದು, ಕೆಲವು ದಿನಗಳಿಂದ ಅಸಮರ್ಪಕ ವಿದ್ಯುತ್ನಿಂದಾಗಿ ಹಲವು ಮನೆಗಳ ಫ್ಯಾನ್, ಪ್ರಿಡ್ಜ್, ವಾಷಿಂಗ್ ಮಿಶನ್, ಪಂಪ್ಸೆಟ್ಗಳು ಸೇರಿದಂತೆ ಗೃಹೋಪಯೋಗಿ ವಿದ್ಯುತ್ ವಸ್ತುಗಳು ಕೆಟ್ಟು ಹೋಗಿದ್ದು, ಸ್ಥಳೀಯ ಪವರ್ಮ್ಯಾನ್ ಅವರಿಗೆ ಮಾಹಿತಿ ನೀಡಿದರೂ ಸರಿಯಾಗದೇ ಇರುವ ನಿಟ್ಟಿನಲ್ಲಿ ತಕ್ಷಣ ವಿದ್ಯುತ್ ಸರಬರಾಜನ್ನು ದುರಸ್ಥಿಗೊಳಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಪರಿಸರದ ಡಾ. ಕೆ.ರಮೇಶ್, ನಿಂಗಪ್ಪ ದೇವೇಂದ್ರಪ್ಪ, ದಯಾನಂದ.ಪಿ, ಲಿಯಾಕ್ರಾಸ್ತಾ, ಲಿಡ್ವಿನ್ ಡಿ ಸೋಜ, ಬಾಲಕೃಷ್ಣ ಪೂಜಾರಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Xl

 

error: Content is protected !!
Scroll to Top