ನೆಹರು ಯುವ ಕೇಂದ್ರ ಸಂಸ್ಥಾಪನಾ ದಿನಾಚರಣೆ ಹಾಗೂ ಜವಾಹರ್ ಲಾಲ್ ಜನ್ಮ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, . 18 ಜಿಲ್ಲಾಮಟ್ಟದ ನೆಹರು ಯುವ ಕೇಂದ್ರದ ಸಂಸ್ಥಾಪನಾ ದಿನಾಚರಣೆ ಹಾಗೂ ಜವಾಹರ್‍ ಲಾಲ್ ಜನ್ಮದಿನಾಚರಣೆಯನ್ನು ನಗರದ ತಾಲೂಕು ಕಚೇರಿ, ಎನ್.ಜಿ.ಓ ಹಾಲ್ ನಲ್ಲಿ  ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾದ ರಾಮಚಂದ್ರ ಬೈಕಂಪಾಡಿ ಮಾತನಾಡಿ, ನೆಹರು ಯುವ ಕೇಂದ್ರ ಮಂಗಳೂರು ಜಿಲ್ಲೆಯ ಯುವಕ ಹಾಗೂ ಯುವತಿ ಮಂಡಲದ ಮೂಲಕ ಸಾಮಾಜಿಕ ಶೈಕ್ಷಣಿಕ ಹಾಗೂ ಅರೋಗ್ಯ ಪೂರ್ಣ ಸಮಾಜವನ್ನು ಕಟ್ಟುವಲ್ಲಿ ಅತ್ಯುತ್ತಮ ಕಾರ್ಯವನ್ನು ನಿರ್ವಹಿಸುತ್ತಿದೆ. ಯುವ ಜನರು ಸಾಮಾಜಿಕ ಮತ್ತು ಸಮುದಾಯದ ಕಾರ್ಯಕ್ರಮದ ಮೂಲಕ ದೇಶದ ಅಭಿವೃದ್ಧಿಗಾಗಿ ಕೈಜೋಡಿಸಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರಪಾಲಿಕೆಯ ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್ ಹಾಗೂ ಶಂಶುದ್ದೀನ್ ಮತ್ತು ಮಂಗಳೂರು ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ರಘುವೀರ್ ಸೂಟರ್ ಪೇಟೆ, ಮತ್ತು ಜಿಲ್ಲೆಯ ಯುವಕ ಹಾಗೂ ಯುವತಿ ಮಂಡಲದ ಅಧ್ಯಕ್ಷರು ಮತ್ತು ಸದಸ್ಯರು  ಉಪಸ್ಥಿತರಿದ್ದರು.

Also Read  ಎಡನೀರು ಮಠಕ್ಕೆ ಭೇಟಿ ನೀಡಿದ ಪುತ್ತೂರು ತಾ. ಹಿಂಜಾವೇ ಪ್ರಮುಖರು

error: Content is protected !!
Scroll to Top