(ನ್ಯೂಸ್ ಕಡಬ) newskadaba.com ಮಂಗಳೂರು, ನ. 18 ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲು ಸುಮಾರು ಮೂರುವರೆ ವರ್ಷ ಬೇಕಾಗಬಹುದು ಎಂದು ರಾಮ ಮಂದಿರ ನಿರ್ಮಾಣ ಟ್ರಸ್ಟ್ ನ ಟ್ರಸ್ಟಿ ಆಗಿರುವ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಂದಿರದ ಅಡಿಪಾಯದ ಸ್ಥಳದ ವಿಸ್ತರಣೆಗೆ ಟ್ರಸ್ಟ್ ನಿರ್ಧರಿಸಿದ್ದು, ಮಂದಿರದ ಜೊತೆಗೆ ಆ ಪ್ರದೇಶದ ಸಾಂಸ್ಕೃತಿಕ ಪುನರುತ್ಥಾನ ಕಾಮಗಾರಿಯನ್ನೂ ಕೈಗೊಳ್ಳಲಾಗುತ್ತದೆ ಎಂದರು. ಅಲ್ಲದೇ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಮಾರು 200 ಅಡಿ ಆಳದವರೆಗೆ ತಗ್ಗು ಮಾಡಿ ಭೂಮಿಯ ಧಾರಣಾ ಶಕ್ತಿ ಪರೀಕ್ಷೆಯನ್ನು ಮಾಡಲಾಗಿದೆ ಎಂದರು. ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ವೇದ ಶಿಲ್ಪ ಕಲಾವಿದರ ತಂಡ ರಚನೆಗೆ ನಿರ್ಧರಿಸಿದ್ದು, ಈ ತಂಡಕ್ಕೆ ನಮ್ಮ ಭಾಗದಿಂದ ಕೃಷ್ಣರಾಜ ತಂತ್ರಿ ಹಾಗೂ ಗುಂಡಿಬೈಲ್ ಸುಬ್ರಹ್ಮಣ್ಯ ಭಟ್ ಅವರ ಹೆಸರು ಸೂಚಿಸಲಾಗಿದೆ. ಮಂದಿರದ ದೇಣಿಗೆ ಸಂಗ್ರಹವನ್ನು ಜನವರಿ 15 ರಿಂದ ಪ್ರಾರಂಭಿಸಲಾಗುವುದು ಎಂದು ಹೇಳಿದರು.