ನಟಿ,ಬಿಜೆಪಿ ನಾಯಕಿ ಖುಷ್ಬೂ ಕಾರು ಅಪಘಾತ

(ನ್ಯೂಸ್ ಕಡಬ) newskadaba.com ಚೆನ್ನೈ  . 18:  ಬಹುಭಾಷಾ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ತಮಿಳುನಾಡಿನ ಮೆಲ್ಮರುವಾತ್ತೂರ್ ಎಂಬಲ್ಲಿ ಈ ಘಟನೆ ನಡೆದಿದೆ. ಟ್ಯಾಂಕರ್ ವೊಂದು ಖುಷ್ಬೂ ಅವರಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಸಾತ್​ ಖುಷ್ಬೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕಾರು ಸಂಪೂರ್ಣ ಜಖಂಗೊಂಡಿದೆ.ಈ ಘಟನೆ ಕುರಿತು ಖುಶ್ಭೂ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ.

Also Read  ಈ ಒಂದು ಪ್ರಯೋಗವನ್ನು ನೀವು ಮಾಡುವುದರಿಂದ ಜೀವನದ ಸರ್ವ ಸಮಸ್ಯೆಗಳಿಂದ ನೀವು ಮುಕ್ತಿಯನ್ನು ಪಡೆಯಬಹುದು

error: Content is protected !!
Scroll to Top