ಪಂಜಾಬ್ ಚುನಾವಣಾ ರಾಯಭಾರಿಯಾಗಿ ಸೋನು ಸೂದ್ ನೇಮಕ

(ನ್ಯೂಸ್ ಕಡಬ) newskadaba.com ನವದೆಹಲಿ  . 18: ಕೊರೊನಾ ಲಾಕ್​ಡೌನ್​ ಘೋಷಣೆಯ ನಂತರ ಸಾವಿರಾರು ಬಡ ಜನರಿಗೆ, ವಿದ್ಯಾರ್ಥಿಗಳಿಗೆ ನೆರವಾಗಿರುವ ಬಹುಭಾಷಾ ನಟ ಸೋನು ಸೂದ್​ ಅವರನ್ನು ಚುನಾವಣಾ ಆಯೋಗ ಪಂಜಾಬ್ ರಾಜ್ಯದ ಚುನಾವಣಾ ರಾಯಭಾರಿಯಾಗಿ ನೇಮಕ ಮಾಡಿದೆ.

 

ಸೋನು ಸೂದ್​ ಲಾಕ್​ಡೌನ್ ಸಮಯದಲ್ಲಿ ನಾನಾ ಸ್ಥಳಗಳಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರಿಗೆ ತಮ್ಮ ತವರಿಗೆ ಮರಳಲು ಸಾರಿಗೆ ಸೌಲಭ್ಯಗಳನ್ನು ಒದಗಿಸಿದ್ದರು. ಕೃಷಿಕರಿಗೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮೂಲಕ ಸಮಾಜದ ಎಲ್ಲಾ ವರ್ಗದವರು ಅವರ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದರು.

Also Read  ಸಾಲ ತೀರಿಸುವಂತೆ ಬ್ಯಾಂಕ್ ಕಳುಹಿಸಿದ ನೋಟಿಸ್‌ಗೆ ಹೆದರಿ ರೈತ ಆತ್ಮಹತ್ಯೆಗೆ ಶರಣು..!

 

ಪಂಜಾಬ್‌ನ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಈ ನಿಟ್ಟಿನಲ್ಲಿ ಇಸಿಐಗೆ ಪ್ರಸ್ತಾವನೆ ಕಳುಹಿಸಿತ್ತು. ಇಸಿಐ ಕೂಡ ಅದಕ್ಕೆ ಅನುಮೋದನೆ ನೀಡಿದೆ. ಸಿಇಒ ಕಚೇರಿ ಈ ನೇಮಕಾತಿ ಜನರಿಗೆ ವಿಶೇಷವಾಗಿ ಯುವ ಮತದಾರರಿಗೆ ನೈತಿಕ ಮತದಾನದ ಬಗ್ಗೆ ತಿಳುವಳಿಕೆ ನೀಡಲು ಪ್ರಯೋಜನಕಾರಿ ಎಂದು ಹೇಳಿದೆ.

 

 

error: Content is protected !!
Scroll to Top