ಸಿಸಿಬಿ ಪೊಲೀಸರ ಮಿಂಚಿನ ಕಾರ್ಯಾಚರಣೆ ➤ ಬೆಳ್ಳಂಬೆಳಗ್ಗೆ ಎರಡು ಕಡೆ ಶೂಟೌಟ್

(ನ್ಯೂಸ್ ಕಡಬ) newskadaba.com ನ. 18. ಬುಧವಾರ ಬೆಳ್ಳಂಬೆಳಿಗ್ಗೆ ಇಬ್ಬರು ರೌಡಿ ಶೀಟರ್‌ಗಳ ಮೇಲೆ ಪೊಲೀಸರು ಶೂಟೌಟ್ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಆರೋಪಿ ರೌಡಿಶೀಟರ್ ನ್ನು ಮಂಜ ಅಲಿಯಾದ ಬೊಂಡ ಮಂಜನ ಎಂದು ಗುರುತಿಸಲಾಗಿದೆ. ಸುಮಾರು 23 ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದ ಈತನನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಇದರಿಂದಾಗಿ ಆತ್ಮರಕ್ಷಣೆಗೋಸ್ಕರ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಈತನು ಕೋಣನಕುಂಟೆ ಪ್ರದೇಶದಲ್ಲಿ ಓಡಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಲು ಬರುತ್ತಿದ್ದಾರೆ ಎಂಬ ಸುಳಿವು ಪಡೆದ ಮಂಜ ತಮಿಳುನಾಡಿಗೆ ಪರಾರಿಯಾಗಲು ಪ್ರಯತ್ನಿಸಿದ್ದ. ನಾರಾಯಣಪುರ ಜೋಡಿ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಮಂಜನನ್ನು ಅಡ್ಡಗಟ್ಟಿದ ಪೊಲೀಸರು ಶರಣಾಗುವಂತೆ ಸೂಚಿಸಿದ್ದು, ಆದರೆ ಈತ ತಪ್ಪಿಸಲು ಪ್ರಯತ್ನಿಸಿದ್ದ. ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಎಚ್ಚರಿಕೆ ನೀಡಿದರಾದರೂ ಆತ ಡ್ಯಾಗರ್‌ನಿಂದ ಹೆಡ್ ಕಾನ್‌ಸ್ಟೆಬಲ್ ನಾಗರಾಜ್ ಮೇಲೆ ಹಲ್ಲೆ ನಡೆಸಿದ್ದು, ಈ ಸಂದರ್ಭ ಸಿಸಿಬಿ ಪೊಲೀಸ್ ತಂಡವು ಮಂಜನ ಎಡ ಮೊಣಕಾಲಿಗೆ ಗುಂಡು ಹಾರಿಸಿದೆ. ಈತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

Also Read  ಮಗು ಪಡೆಯಲು ಅಪ್ರಾಪ್ತ ಬಾಲಕಿಯ ನರಬಲಿ➤ ಆರೋಪಿ ಬಂಧನ

error: Content is protected !!
Scroll to Top