ಉಡುಪಿ :ಆಕಸ್ಮಿಕವಾಗಿ ಕೆರೆಗೆ ಬಿದ್ದು ಯಕ್ಷಗಾನ ಕಲಾವಿದ ಮೃತ್ಯು

(ನ್ಯೂಸ್ ಕಡಬ) newskadaba.com ಉಡುಪಿ . 18: ಉಡುಪಿಯ ಅಮಾಸೆಬೈಲು ಗ್ರಾಮದ ಕೆಲ ಸುಗ್ಗಿಗದ್ದೆ ಸುದೀಪ ಶೆಟ್ಟಿ(24) ಅವರು ಮನೆಯ ಪಕ್ಕದ ಕೆರೆಗೆ ಆಕಸ್ಮಿಕವಾಗಿ ಬಿದ್ದು ಸಾವನ್ನಪಿದ್ದ ಘಟನೆ ನಡೆದಿದೆ.

 

 

ಯಕ್ಷಗಾನ ಕಲಾವಿದರಾಗಿದ್ದ ಸುದೀಪ ಶೆಟ್ಟಿ ಎರಡು ವರುಷದ ಹಿಂದೆ ರಸ್ತೆ  ಅಪಘಾತಕ್ಕೊಳಗಾಗಿ ಆಗಾಗ್ಗೆ ತಲೆಸುತ್ತು ಬಂದು ಬೀಳುತ್ತಿದ್ದರು. ಮನೆಯಿಂದ ಹೊರಗೆ ಹೋದವರು ಮರಳಿ ಬಾರದೆ ಇದ್ದಾಗ ಮನೆಯವರು ಹುಡುಕಾಡಿದ್ದಾರೆ. ಈ ವೇಳೆ ಸುದೀಪ ಶೆಟ್ಟಿ ಅವರ ಮೃತದೇಹ ಸಮೀಪದ ನೀರಿನ ತೋಡಿನಲ್ಲಿ ಪತ್ತೆಯಾಗಿದೆ. ಮೇಗರವಳ್ಳಿ, ಸಿಗಂದೂರು ಹಾಗೂ ಮಂದಾರ್ತಿ ಮೇಳಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಸ್ತ್ರೀ ವೇಷಧಾರಿಯಾಗಿದ್ದರು. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮಂಗಳೂರು: ಆರೋಪಿಯೊಂದಿಗೆ ಸೇರಿ 8 ಸಿಸಿಬಿ ತಂಡದಿಂದ ಬಾರ್ ಪಾರ್ಟಿ- ವಿಡಿಯೋ ವೈರಲ್ ➤ ಸೂಕ್ತ ತನಿಖೆಗೆ ಕಮಿಷನರ್ ಆದೇಶ

 

 

Xl

error: Content is protected !!
Scroll to Top