ಪುತ್ತೂರು: ಆಸ್ಮಿಕವಾಗಿ ಬಾವಿಗೆ ಬಿದ್ದ ವೃದ್ಧೆ ➤ ಅಗ್ನಿಶಾಮಕ ದಳದಿಂದ ರಕ್ಷಣೆ

(ನ್ಯೂಸ್ ಕಡಬ) newskadaba.com ಪುತ್ತೂರು, ನ. 18:  ಕಳೆದ ದಿನ ಆರ್ಯಾಪು ಮರಿಕೆಯಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ವೃದ್ಧೆಯೋರ್ವರನ್ನು ಪುತ್ತೂರು ಅಗ್ನಿ ಶಾಮಕ ದಳದವರು ರಕ್ಷಣೆ ಮಾಡಿದ ಘಟನೆ ನಡೆದಿದೆ.

 

 

ಬಾವಿಗೆ ಬಿದ್ದ ವೃದ್ಧೆಯನ್ನು ಆರ್ಯಾಪು ಮರಿಕೆ ನಿವಾಸಿ 90 ವರ್ಷ ಪ್ರಾಯದ ಸರಸ್ವತಿ ಎಂದು ಗುರುತಿಸಲಾಗಿದೆ. ಇವರು ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ನೀರು ತರಲೆಂದು ಹೋದವರು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾರೆ. ವಿಷಯ ಕೇಳಿದ ಕೂಡಲೇ ಪಕ್ಕದ ಮನೆಯವರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಕಾರ್ಯಚರಣೆ ನಡೆಸಿ ವೃದ್ಧೆಯನ್ನು ರಕ್ಷಣೆ ಮಾಡಿದ್ದಾರೆ. ಇನ್ನು ವೃದ್ಧೆಗೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಹೊಂದಿದ್ದಾರೆ. ಅವರು ಅಗಾಗ ಮನೆಗೆ ಬಂದು ಹೋಗುತ್ತಿದ್ದರು ಅಷ್ಟೆ ಆದರೇ ಮನೆಯಲ್ಲಿ ವೃದ್ಧೆಯೋರ್ವರೇ ಇರುತ್ತಿದ್ದರು.

Also Read  ಕ್ಯಾನ್ಸರ್‌ ಬಾಧಿತ ಮಹಿಳೆಗೆ ಉಚಿತ ಆಯಂಬುಲೆನ್ಸ್‌ ಸೇವೆ ➤ ಅಭಿಲಾಷ್‌ ಅವರು ಮಾನವೀಯ ನಡೆಗೆ ಶ್ಲಾಘನೆ

 

Xl

error: Content is protected !!
Scroll to Top