ಮುಲ್ಕಿಯಲ್ಲಿ ಶೆಡ್ ಗೆ ಸಿಡಿಲು ಬಡಿದು ಹಾನಿ ➤ ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ಮುಲ್ಕಿ ನ. 17 :ಮುಲ್ಕಿ ಹೋಬಳಿಯಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಗಾಳಿ, ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದ್ದು ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

ಮುಲ್ಕಿ ಹೋಬಳಿಯ ಕಿನ್ನಿಗೋಳಿ-ಹಳೆಯಂಗಡಿ ಪಕ್ಷಿಕೆರೆ ಕಟೀಲು ಪರಿಸರದಲ್ಲಿ ಭಾರಿ ಮಳೆಯಾಗಿದೆ. ಬಿರು ಮಳೆ, ಸಿಡಿಲಿಗೆ ಸೋಮವಾರ ರಾತ್ರಿ 11.30ಕ್ಕೆ ಕಿನ್ನಿಗೋಳಿ ಬಳಿಯ ಮೂರುಕಾವೇರಿ ಜಂಕ್ಷನ್ ಸಮೀಪ ಲಿಯೋ ಮಾರ್ಸೆಲ್ ಪಿಂಟೋ ಎಂಬವರ ಮನೆ ಬಳಿಯ ಶೆಡ್ ಗೆ ಆಕಸ್ಮಿಕ ಬೆಂಕಿ ತಗುಲಿ ಒಳಗಿದ್ದ ಬೈಹುಲ್ಲು, ಮರಮಟ್ಟು, ತೆಂಗಿನಕಾಯಿ, ಸಿಂಟೆಕ್ಸ್ ಟ್ಯಾಂಕ್ ಸಹಿತ ಶೆಡ್ ಗೆ ಹಾನಿಯಾಗಿ, ಲಕ್ಷಾಂತರ ರೂ. ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಮೆನ್ನಬೆಟ್ಟು ಪಂ. ಮಾಜಿ ಸದಸ್ಯ ಮೋರ್ಗನ್ ವಿಲಿಯಂ, ಸಾಮಾಜಿಕ ಕಾರ್ಯಕರ್ತ ಸುನಿಲ್ ಸಿಕ್ವೇರಾ, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Also Read  ಹಸಿ ಮೀನುಗಳಿಗೆ ಫಾರ್ಮಾಲಿನ್ ಬಳಸಿದರೆ ಕ್ರಿಮಿನಲ್ ಕೇಸ್ ➤ ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಕೆ

error: Content is protected !!
Scroll to Top