ಆರೇಲ್ತಡಿ ಶಾಲೆಯಲ್ಲಿ ► ಮಹಾತ್ಮಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ

(ನ್ಯೂಸ್ ಕಡಬ) newskadaba.com ಪುತ್ತೂರು,ಅ.4. ಇಲ್ಲಿನ ಸವಣೂರು ಗ್ರಾಮದ ಆರೆಲ್ತಡಿ ಸ.ಕಿ.ಪ್ರಾಥಮಿಕ ಶಾಲೆಯಲ್ಲಿ ಗಾಂಧೀಜಯಂತಿಯನ್ನು ಶಾಲಾ ಮಕ್ಕಳೊಂದಿಗೆ ಆಚರಿಸಲಾಯಿತು.


ಶಿಕ್ಷಣತಜ್ಞ, ಸವಣೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಅವರು ದೀಪಬೆಳಗಿಸಿ ಮಹಾತ್ಮಗಾಂಧೀಜಿ ಹಾಗೂ ಲಾಲ್ ಬಹದ್ದೂರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈ ದಿನ ದೇಶದಾದ್ಯಂತ ಇಂತಹ ಮಹಾತ್ಮರ ಜನ್ಮದಿನಾಚರಣೆಯನ್ನು ಆಚರಿಸುತ್ತಿದ್ದು ಸ್ವಚ್ಚಭಾರತ ದಿನವನ್ನಾಗಿಯೂ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದಾರೆ ಗಾಂಧೀಜಿಯ ಕನಸುಗಳನ್ನು ನನಸು ಮಾಡುವ ಪಣತೊಡೋಣ. ಮಹಾತ್ಮರ ಆದರ್ಶ, ಮೌಲ್ಯಗಳ ದಾರಿಯಲ್ಲಿ ಮುನ್ನಡೆಯೋಣ ಎಂದರು.

Also Read  ಕದ್ರಿ ಪಾರ್ಕ್- ಸಂಗೀತ ಕಾರಂಜಿ/ಲೇಸರ್ ಶೋ ಆರಂಭ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಹೇಮಾರಾಮಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಕುದ್ಮನಮಜಲು, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ನಾರಾಯಣ ಗೌಡ ಕೆಡೆಂಜಿಮಾರು, ಹಾಗೂ ಸದಸ್ಯರು, ಪೋಷಕರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು ಮುಖ್ಯಗುರು ಜಗನ್ನಾಥ ಎಸ್.ಸ್ವಾಗತಿಸಿ, ಶಿಕ್ಷಕಿ ಕು.ದಯಾಮಣಿ ವಂದಿಸಿದರು.

error: Content is protected !!
Scroll to Top