ಆನೆದಂತ ಮಾರಾಟ ಮಾಡಲೆತ್ನಿಸುತ್ತಿದ್ದ ಮೂವರು ಆರೋಪಿಗಳ ಬಂಧನ



(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 17. ಆನೆ ದಂತ ಮಾರಾಟ ಮಾಡಲೆತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಹೆಬ್ಬಾಳ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.





 

ಆರೋಪಿಗಳನ್ನು ಚಿತ್ತೂರು ಜಿಲ್ಲೆಯ ಗುಟ್ಟುಪಾಳ್ಯಂ ನಿವಾಸಿ ಲೋಕೇಶ್‌, ಮದನಪಲ್ಲಿಯ ಪೂಲಾಕುಟ್ಲಪುರ ನಿವಾಸಿ ಮಂಜುನಾಥ್‌ ಎನ್, ಶ್ರೀಹರಿಪುರ ನಿವಾಸಿ ಗೋಪಿ ಎಂದು ಗುರುತಿಸಲಾಗಿದೆ.  ಆರೋಪಿಗಳು ಸೋಮವಾರ ಮಧ್ಯಾಹ್ನ ಹೆಬ್ಬಾಳದ ಗುಡ್ಡದಹಳ್ಳಿ ಟೆಂಪೋ ನಿಲ್ದಾಣ ಬಳಿ ಆನೆ ದಂತ ಮಾರಲು ಯತ್ನಿಸಿದ್ದ ವೇಳೆ ಖಚಿತ ಮಾಹಿತಿ ಪಡೆದ ಹೆಬ್ಬಾಳ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಆನೆ ದಂತ ವಶಪಡಿಸಿಕೊಂಡಿದ್ದಾರೆ. ಹೆಬ್ಬಾಳ ಪೊಲೀಸರು ಪ್ರಕರಣ ದಾಖಲಿಸಿ, ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಶೋಧ ಮುಂದುವರೆಸಿದ್ದಾರೆ.






error: Content is protected !!
Scroll to Top