ಪುತ್ತೂರು ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀವು ಪಡೆಯಬೇಕೆ..??? ► ಹಾಗಿದ್ದರೆ ಇದನ್ನು ಪೂರ್ತಿಯಾಗಿ ಓದಿರಿ…

(ನ್ಯೂಸ್ ಕಡಬ) newskadaba.com ಪುತ್ತೂರು,ಅ.4. ವಿದ್ಯಾಮಾತಾ ಫೌಂಡೇಶನ್ ಇದರ ವತಿಯಿಂದ “ಪುತ್ತೂರು ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಗೆ ಮುಕ್ತ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಈ ಪ್ರಶಸ್ತಿಯು ಒಂದು ಲಕ್ಷ ರೂ ಮೊತ್ತ, ಸ್ಮರಣಿಕೆ, ಪ್ರಶಸ್ತಿ ಪತ್ರವನ್ನು ಒಳಗೊಂಡಿರಲಿದೆ ಎಂದು ವಿದ್ಯಾಮಾತಾ ಫೌಂಡೇಶನ್ ಅಧ್ಯಕ್ಷ ಭಾಗ್ಯೇಶ್ ರೈ ಹೇಳಿದರು.

ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಶಸ್ತಿಯು ಪುತ್ತೂರು ತಾಲೂಕಿನ ಸರಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಅನ್ವಯಯವಾಗುತ್ತದೆ. ಪ್ರಶಸ್ತಿಗೆ ಅರ್ಹ ಶಿಕ್ಷಕರನ್ನು ವಿದ್ಯಾರ್ಥಿಗಳು, ಸಾರ್ವಜನಿಕರು vidyamaatha app ನ್ನು play store ನಲ್ಲಿ download ಮಾಡಿಕೊಂಡು ವೋಟ್ ಕಾಲಂ ನಲ್ಲಿ ಅರ್ಜಿಯನ್ನು ತುಂಬುವುದರ ಮುಖಾಂತರ ಸೂಚಿಸಬಹುದಾಗಿದೆ.

Vidyamaatha app ನ್ನು download ಮಾಡಲು ಈ ಲಿಂಕ್ ಬಳಸಬಹುದು

Also Read  ಅಸ್ಸಾಂ ರೈಫಲ್ಸ್ ಯೂನಿಟ್ ಮೇಲೆ ಉಗ್ರ ದಾಳಿ ➤ 3 ಭಾರತೀಯ ಯೋಧರು ಹುತಾತ್ಮ

https://play.google.com/store/apps/details? id=com.wVidyamaatha_5648444.

ಆಯ್ಕೆ ಪ್ರಕ್ರಿಯೆ ಅಕ್ಟೋಬರ್ 1ರಿಂದ 15 ರ ವರೆಗೆ ನಡೆಯಲಿದ್ದು, ಅಂತಿಮ ನಿರ್ಧಾರ ವಿದ್ಯಾಮಾತ ಕಾರ್ಯಕಾರಿ ಸಮಿತಿಯದ್ದಾಗಿರುತ್ತದೆ. ಯಾವುದೇ ಶಿಫಾರಸ್ಸುಗಳನ್ನು ಪರಿಗಣಿಸಲಾಗುವುದಿಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ವಿದ್ಯಾಮಾತಾ ಫೌಂಡೇಶನ್ ನ‌ ಸಂಚಾಲಕ ಮಹೇಶ್ ಭಟ್ ಎಳ್ಯಡ್ಕ, ಸಂಘಟನಾ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ ಉಪಸ್ಥಿತರಿದ್ದರು.

ವಿದ್ಯಾಮಾತಾ ಫೌಂಡೇಶನ್ ನಿಂದ ಈಗಾಗಲೇ ಉದ್ಯೋಗ ಮೇಳ‌ ನಡೆಸಿ ಹಲವರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗಿದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆಯಲಾಗಿದೆ. ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಮುಂದೆ ಸ್ಪೋಕನ್ ಇಂಗ್ಲೀಷ್ ನಡೆಸುವ ಯೋಜನೆಯೂ ಇದೆ ಎಂದು ವಿವರಿಸಿದರು.

error: Content is protected !!
Scroll to Top