ಕಾಪು: ಕಲಬೆರಕೆ ಜೇನು ತುಪ್ಪ ಮಾರಾಟ ➤ ನಾಲ್ವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಕಾಪು, ನ. 17: ತಾಲೂಕಿನ ಮಜೂರು ಪರಿಸರದಲ್ಲಿ ಕಲಬೆರಕೆ ಜೇನು ತುಪ್ಪ ಮಾರಾಟ ಮಾಡಿ ಸ್ಥಳೀಯರನ್ನು ಮೋಸ ಮಾಡುತ್ತಿದ್ದ ಬಿಹಾರ ಮೂಲದ ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

 

 

ವಶಕ್ಕೆ ಪಡೆದ ಯುವಕರನ್ನು ಬಿಹಾರ ಮೂಲದ ರೋಹನ್, ಪರಮ್, ಸಿಂಗ್, ವಿಕಾಸ್, ಬಾದ್ ಶಾ ಎಂದು ಗುರುತಿಸಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಮುಜೂರು ಪರಿಸರದಲ್ಲಿ ಜೇನು ಮಾರಾಟ ಮಾಡುತ್ತಾ ಬಂದಿದ್ದು, ಸ್ಥಳೀಯರು ಮುಗಿಬಿದ್ದು ಖರೀದಿಸುತ್ತಿದ್ದರು. ಬಳಿಕ ಅದು ಕಲಬೆರಕೆ ಮಿಶ್ರಣವೆಂದು ತಿಳಿದು ಬಂದಿದೆ. ಸ್ಥಳೀಯರು ಮಾರಾಟ ಮಾಡುತ್ತಾ ಬಂದ ತಂಡವನ್ನು ಹಿಡಿದು ನಿಲ್ಲಿಸಿ, ಪ್ರಶ್ನಿಸಿದಾಗ ಯುವಕರು ತಪ್ಪು ಒಪ್ಪಿಕೊಂಡಿದ್ದಾರೆ. ತಾವು ಜೇನು ಗುಡಿನಿಂದ ಜೇನು ತೆಗೆದು ಬಳಿಕ ಅದಕ್ಕೆ ಸಕ್ಕರೆ, ಬೆಲ್ಲ ಮತ್ತಿತರ ಸಾಮಾಗ್ರಿಗಳನ್ನು ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದೇವೆ. ಹೆಚ್ಚಾಗಿ ಹಳ್ಳಿ ಪ್ರದೇಶದ ಜನರನ್ನೇ ಟಾರ್ಗೆಟ್ ಮಾಡಿ ಜೇನು ತುಪ್ಪ ಮಾರಾಟ ಮಾಡುತ್ತಿದ್ದೆವು ಎಂದು ತಿಳಿಸಿದ್ದಾರೆ. ಇದರಿಂದಾಗಿ ಕಾಪು ಠಾಣಾ ಪೊಲೀಸರು ಯುವಕರ ತಂಡವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Also Read  ಹಾರಿಕಾ ಮಂಜುನಾಥ್ ರಿಂದ ಅಝಾನ್ ಬಗ್ಗೆ ಸುಳ್ಳಾರೋಪ..! ➤ ಪಿಎಫ್ ಐ ಬೆಳ್ತಂಗಡಿ ವತಿಯಿಂದ ದೂರು ದಾಖಲು

 

Xl

 

error: Content is protected !!
Scroll to Top