ನರಿಮೊಗರು : ಮನೆಯ ಹೆಂಚು ತೆಗೆದು ಕಳ್ಳತನಕ್ಕೆ ಯತ್ನ

(ನ್ಯೂಸ್ ಕಡಬ) newskadaba.com ನರಿಮೊಗರು . 17: ಕಳ್ಳರು ತಮ್ಮ ಕೆಲಸ ಸಾಧಿಸಲು ವಿಭಿನ್ನವಾಗಿ ಕೈ ಚಲಕ ತೋರಿಸಿದ್ದಾರೆ. ರಾತ್ರಿ ವೇಳೆ ಮನೆಯವರೆಲ್ಲ ಮಲಗಿದ್ದ ವೇಳೆ, ಖದೀಮರು ಮನೆಯ ಹೆಂಚು ಎರಡು ತೆಗೆದು ಒಳ ನುಸುಳಲು ಯತ್ನಿಸಿದ್ದಾನೆ. ಈ ಘಟನೆ ನರಿಮೊಗರು ಗ್ರಾಮದ ಮಣಿಯ ಎಂಬಲ್ಲಿ ನಡೆದಿದೆ.

 

ನ.16 ರ ರಾತ್ರಿ ನರಿಮೊಗರು ಗ್ರಾಮದ ಮಣಿಯ ನಿವಾಸಿ ಉಸ್ಮಾನ್ ಎನ್ ಅವರ ಮನೆಯಲ್ಲಿ ಕಳ್ಳತನದ ಯತ್ನ ನಡೆದಿದೆ. ಉಸ್ಮಾನ್ ರವರು ರಾತ್ರಿ ಮಲಗಿದ್ದ ಸಮಯದಲ್ಲಿ ಕಳ್ಳರು ಮನೆಯ ಎರಡು ಹಂಚು ತೆಗೆಯಲು ಯತ್ನಿಸಿದ್ದಾರೆ. ಈ ವೇಳೆ ಶಬ್ದವಾಗಿದ್ದು. ಉಸ್ಮಾನ್ ರವರು ಎಚ್ಚರಗೊಂಡಿದ್ದಾರೆ. ಈ ವೇಳೆ ಕಳ್ಳರುಪರಾರಿಯಾಗಿದ್ದಾರೆ. ಈ ಘಟನೆ ಸಂಬಂಧ ಪುತ್ತೂರು ನಗರ ಠಾಣೆ ಪೊಲೀಸರಿಗೆ ಉಸ್ಮನ್ ದೂರು ನೀಡಿದ್ದಾರೆ.

Also Read  ಕಡಬ ಕೇಂದ್ರ ಜುಮಾ ಮಸೀದಿಯಲ್ಲಿ ಇಂದು ಉರೂಸ್ ಸಮಾರೋಪ

 

Xl

error: Content is protected !!
Scroll to Top