ಕರ್ನಾಟಕ ದ.ಸಂ.ಸ ಪ್ರೊ.ಕೃಷ್ಣಪ್ಪ ಸ್ಥಾಪಿತ ವತಿಯಿಂದ ಎಂ.ಜಯಣ್ಣ ಚಿತ್ರದುರ್ಗ ಅವರಿಗೆ ಶ್ರದ್ಧಾಂಜಲಿ

(ನ್ಯೂಸ್ ಕಡಬ) newskadaba.com ಮಂಗಳೂರು, . 16. ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ. ಕೃಷ್ಣಪ್ಪ ಸ್ಥಾಪಿತ  .. ಜಿಲ್ಲೆ ಮತ್ತು ಉಡುಪಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳ ಸಭೆ  ನವೆಂಬರ್ 13ರಂದು ರಾಜ್ಯ ಸಂಚಾಲಕರಾದ ಹೆಣ್ಣೂರು ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಮಂಗಳೂರು ನಗರದ ಡಿ ಗ್ರೂಪ್ ನೌಕರರ ಸಭಾಭವನದಲ್ಲಿ ನಡೆಯಿತು.



ಪ್ರಾರಂಭದಲ್ಲಿ ಮಾಜಿ ಸಂಚಾಲಕರಾಗಿದ್ದ ಹಿರಿಯ ನಾಯಕ ಎಂ.ಜಯಣ್ಣ ಚಿತ್ರದುರ್ಗ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಯಿತು. ರಾಜ್ಯ ಜಿಲ್ಲಾ ಸಂಚಾಲಕರಾದ ಹೆಣ್ಣೂರು ಶ್ರೀನಿವಾಸ್ ಎಂ ಜಯಣ್ಣ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭೆಯಲ್ಲಿ ಉಭಯ ಜಿಲ್ಲೆಗಳಲ್ಲಿ ಸಂಘಟನೆಯನ್ನು ಬಲಪಡಿಸುವ ಬಗ್ಗೆ ರಾಜ್ಯ ಸಂಘಟನಾ ಸಂಚಾಲಕರಾದ ಎಸ್. ಎನ್. ಮಲ್ಲಪ್ಪ ಮಾತನಾಡಿದರು ಹಾಗೂ ಒಳ ಮೀಸಲಾತಿ ಜಾರಿ  ಬಗ್ಗೆ ರಾಜ್ಯಾದ್ಯಾಂತ ಪ್ರತಿ ಜಿಲ್ಲೆಗಳಲ್ಲಿ ಸಂವಾದ ಕಾರ್ಯಕ್ರಮ ಜರುಗುತ್ತಿದ್ದು .. ಮತ್ತು ಉಡುಪಿ ಜಿಲ್ಲೆಯ ಒಳ ಮೀಸಲಾತಿ ಸಂವಾದ ಕಾರ್ಯಕ್ರಮಗಳನ್ನು ಉಭಯ ಜಿಲ್ಲಾ ಮಟ್ಟದಲ್ಲಿ ಉಡುಪಿ ಸಮೀಪ ಪಡುಬಿದ್ರೆಯಲ್ಲಿ ಅಂಬೇಡ್ಕರ್ ಪರಿನಿಬ್ಭಣ ದಿನ ಡಿಸೆಂಬರ್ 6ರಂದು ನಡೆಸುವಂತೆ ಸಭೆಯಲ್ಲಿ ನಿರ್ಧರಿಸಲಾಗಿದ್ದು ಕಾರ್ಯಕ್ರಮದಲ್ಲಿ ..ಸಂ ಕಾರ್ಯಕರ್ತರು ಹಾಗೂ ಅಂಬೇಡ್ಕರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಯಿತು. ಸಭೆಯಲ್ಲಿ ಹಿರಿಯ ನಾಯಕರಾದ ಸುಂದರ್ ಉಳ್ಳಾಲ್, ಎಂ.ವಿ. ಪದ್ಮನಾಭ ನೌಕರರ ಘಟಕ ರಾಜ್ಯ ಅಧ್ಯಕ್ಷರಾದ  ಜೆ. ಶ್ರೀನಿವಾಸುಲು, ವಿಭಾಗೀಯ ಸಂಚಾಲಕರಾದ ಶೇಖರ್ ಹೆಜಮಾಡಿ, .. ಜಿಲ್ಲಾ ಸಂಚಾಲಕರಾದ ಶೇಖರ್ ಚಿಲಿಂಬಿ, ಉಡುಪಿ ಜಿಲ್ಲಾ ಸಂಚಾಲಕರಾದ ಆನಂದ್ ಬ್ರಹ್ಮಾವರ , ಲಕ್ಷ್ಮಣ್ ವಾಮಂಜೂರು, ಕೆ.ಎಸ್. ಹೊನ್ನಯ್ಯ, ಪೇಜಾವರ ಜಿಲ್ಲಾ ಮಹಿಳಾ ಘಟಕ ಸಂಚಾಲಕಿ ಶ್ರೀಮತಿ ಯಶೋದ ಚಿಲಿಂಬಿ, ರಾಮ್ ರಾಯ, ಕೃಷ್ಣ ಬಜೆ, ಸುರೇಶ್ ಕೆರೆಕಾಡ್, ನಾಗೇಶ್ ಬಲ್ಮಠ ಇನ್ನೂ ಇತರರು ಭಾಗವಹಿಸಿದ್ದರು. ಕೊನೆಯಲ್ಲಿ ಕೆ.ಎಸ್. ಹೊನ್ನಯ್ಯ ಸ್ವಾಗತಿಸಿ ಲಕ್ಷ್ಮಣ್ ವಾಮಂಜೂರು ವಂದಿಸಿದರು.

Also Read  'ರಾಜ್ಯ ಸರಕಾರ ದ.ಕ. ಜಿಲ್ಲೆಗೆ 300 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು'          ವೇದವ್ಯಾಸ ಕಾಮತ್             

error: Content is protected !!
Scroll to Top