ಹೇಮಳ: ಕೆಮ್ಮಲೆ ನಾಗಬ್ರಹ್ಮ ದೇವಸ್ಥಾನಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ

(ನ್ಯೂಸ್ ಕಡಬ) newskadaba.com ಹೇಮಳ . 16:  ಕೆಮ್ಮಲೆ ನಾಗಬ್ರಹ್ಮ ದೇವಸ್ಥಾನ ಹೇಮಳ ಇದರ ಜೀರ್ಣೋದ್ದಾರ ಕಾರ್ಯವನ್ನು ಸಂಸದೆ ಹಾಗೂ ಜೀರ್ಣೋದ್ದಾರ ಗೌರವಾಧ್ಯಕ್ಷರಾದ ಶೋಭಾ ಕರಂದ್ಲಾಜೆ ಇಂದು ಭೇಟಿ ನೀಡಿ ವೀಕ್ಷಿಸಿದರು.

 

 

 

ಬಳಿಕ ಸರಕಾರ ನೀಡಿದ 50 ಲಕ್ಷ ರೂ ಅನುದಾನವನ್ನು ಸಮರ್ಪಕ ರೀತಿಯಲ್ಲಿ ಉಪಯೋಗಿಸಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಾಕಿ ಉಳಿದ ಕಾಮಗಾರಿಗಳಿಗೆ ಅನುದಾನ ಒದಗಿಸಿಕೊಂಡುವಂತೆ ಊರವರು ಸಂಸದೆ ಶೋಭ ಕರಂದ್ಲಾಜೆ ಅವರಿಗೆ ಮನವಿ ನೀಡಿದರು. ಮನವಿ ತಕ್ಷಣವೇ ಸ್ಪಂದಿಸುವ ಭರವಸೆ ನೀಡಿದರು. ಬ್ರಹ್ಮಕಲಶೋತ್ಸವದ ಕುರಿತು ಚರ್ಚಿಸಿ ಎಲ್ಲರ ಸಹಕಾರದಲ್ಲಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

Also Read  ಭಾರತೀಯ ಸೇನೆಗೆ ಈಗ ಆನೆ ಬಲ ➤ ಅಂಬಾಲಾ ಏರ್ ಬೇಸ್ ಗೆ ಆಗಮಿಸಿದ ರಾಫೆಲ್ ಯುದ್ಧ ವಿಮಾನ

 

Xl

error: Content is protected !!
Scroll to Top