ಕುಕ್ಕೆ ಸುಬ್ರಹ್ಮಣ್ಯ: ತುಲಾಭಾರ,ಅನ್ನಪ್ರಾಶನ ಸೇವೆ ಆರಂಭ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ . 16: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರ ದಿಂದ ತುಲಾಭಾರ ಮತ್ತು ಅನ್ನಪ್ರಾಶನ ಸೇವೆಗಳು ಆರಂಭಗೊಂಡಿವೆ. ಇದರಿಂದಾಗಿ ಕ್ಷೇತ್ರದಲ್ಲಿ ಇದೀಗ ಎಲ್ಲ ಸೇವೆಗಳು ಪ್ರಾರಂಭಗೊಂಡಿವೆ.

 

ದೀಪಾವಳಿ ಪ್ರಯುಕ್ತ ಪಲ್ಲಕ್ಕಿ ಮತ್ತು ಬಂಡಿ ಉತ್ಸವ ನೆರವೇರಿದವು. ಕ್ಷೇತ್ರದಲ್ಲಿ ಸೋಮವಾರ ದೇವರು ಹೊರಾಂಗಣ ಪ್ರವೇಶಿಸುವ ಮೂಲಕ ಉತ್ಸವಾದಿಗಳು ಆರಂಭಗೊಳ್ಳಲಿವೆ. ಲಕ್ಷ ದೀಪೋತ್ಸವದ ನಂತರ ರಥ ಬೀದಿಯಲ್ಲಿ ರಥೋತ್ಸವಗಳೂ ನಡೆಯಲಿವೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್‌. ತಿಳಿಸಿದ್ದಾರೆ.

Also Read  ದೇಶದೆಲ್ಲೆಡೆ ಸಂವಿಧಾನ ದಿವಸವನ್ನು ಆಚರಿಸುತ್ತಿರುವ ಹಿನ್ನಲೆಯಲ್ಲಿ, ➤ ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರು ಭಾಷಣ ಸ್ಪರ್ಧೆ

 

 

error: Content is protected !!
Scroll to Top