ಕಡಬ: ಹೆರಿಗೆ ವೇಳೆ ತೀವ್ರ ರಕ್ತಸ್ರಾವಕ್ಕೊಳಗಾಗಿ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಕೊಂಬಾರು, ನ.15. ಬಾಣಂತಿ ಮಹಿಳೆಯೋರ್ವರು ತೀವ್ರ ರಕ್ತಸ್ರಾವಕ್ಕೊಳಗಾಗಿ ಮೃತಪಟ್ಟ ಘಟನೆ ಭಾನುವಾರದಂದು ಕಡಬದಲ್ಲಿ ನಡೆದಿದೆ.

 

 

ಮೃತ ಮಹಿಳೆಯನ್ನು ಕೊಂಬಾರು ಗ್ರಾಮದ ಮಣಿಬಾಂಡ ಸಮೀಪದ ಕೆರೊಂದೋಡಿ ನಿವಾಸಿ ಬಾಲಕೃಷ್ಣ ಎಂಬವರ ಪತ್ನಿ ಸುನೀತಾ(35) ಎಂದು ಗುರುತಿಸಲಾಗಿದೆ. ಏಳನೇ ಗರ್ಭಿಣಿಯಾಗಿದ್ದ ಈಕೆಗೆ ಭಾನುವಾರದಂದು ಮನೆಯಲ್ಲೇ ಹೆರಿಗೆಯಾಗಿದ್ದು, ತೀವ್ರ ರಕ್ತಸ್ರಾವಕ್ಕೊಳಗಾದ ಮಹಿಳೆಯನ್ನು ತಕ್ಷಣವೇ 108 ಆಂಬ್ಯುಲೆನ್ಸ್ ಮೂಲಕ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತಾದರೂ ಅದಾಗಲೇ ಮೃತಪಟ್ಟರು ಎಂದು ತಿಳಿದುಬಂದಿದೆ. ಮಗು ಆರೋಗ್ಯವಾಗಿದ್ದು, ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಗೀತಾಜಯಂತಿ ಕಾರ್ಯಕ್ರಮ ➤ ಪ್ರತಿಭೆ ಯಾವುದೇ ಧರ್ಮ ಜಾತಿಯ ಸೊತ್ತಲ್ಲ- ಡಾ. ಪ್ರಭಾಕರ್

 

 

 

error: Content is protected !!
Scroll to Top