ನಡುಗಲ್ಲಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸಭಾಭವನದ ಕಾಮಗಾರಿ ವೀಕ್ಷಿಸಿದ ಶಾಸಕರು

(ನ್ಯೂಸ್ ಕಡಬ) newskadaba.com ನಡುಗಲ್ಲು . 15: ತಲೆ ಎತ್ತಲಿರುವ ಸಭಾಭವನದ ಕಾಮಗಾರಿಯನ್ನು ಸುಳ್ಯ ಶಾಸಕ ಎಸ್ ಅಂಗಾರರವರು ಇಂದು ವೀಕ್ಷಣೆ ಮಾಡಿದ್ದಾರೆ. ನಾಲ್ಕೂರು ಗ್ರಾಮದ ನಡುಗಲ್ಲಿನಲ್ಲಿ ಯುವಕ ಮಂಡಲ ನಡುಗಲ್ಲು ಮತ್ತು ದುರ್ಗಾಪರಮೇಶ್ವರಿ ವನಿತಾ ಸಮಾಜ ನಡುಗಲ್ಲು ಇವುಗಳ ಜಂಟಿ ಆಶ್ರಯದಲ್ಲಿ ಸಭಾಭವನ ರೂಪುಗೊಳ್ಳಲಿದ್ದು ಕೆಲಸ ಭರದಿಂದ ಸಾಗುತ್ತಿದ್ದೆ.

ಸುಮಾರು 50 ಲಕ್ಷ ವೆಚ್ಚದ ಸಭಾಭವನ ನಿರ್ಮಾಣವಾಗಲಿದ್ದು, ಇದರಲ್ಲಿ ಎರಡೂ ಸಂಸ್ಥೆಗಳಿಗೆ ಪ್ರಥಮ ಮಹಡಿಯಲ್ಲಿ ಕಚೇರಿ ತಳ ಮಡಿಯಲ್ಲಿ ವೇದಿಕೆ, ವೇದಿಕೆಯ ಎರಡು ಬದಿ ಗ್ರೀನ್ ರೂ ಬರಲಿದೆ ಎಂದಿದ್ದಾರೆ. ಶಾಸಕರ ಭೇಟಿ ವೇಳೆ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಹರೀಶ್ ಕಂಜಿಪಿಲಿ, ಬಾಲಕೃಷ್ಣ ಉಜಿರಡ್ಕ, ಅಚ್ಚುತ ಗುತ್ತಿಗಾರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Also Read  ಡಿ.14ರಂದು ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ

 

 

error: Content is protected !!
Scroll to Top