ನ. 18 ರಂದು ಕೆ.ಎಂ.ಎಫ್. ವತಿಯಿಂದ ಕೌಶಲ್ಯಾಭಿವೃದ್ಧಿ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು ನ. 15: ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಮಂಗಳೂರು ಮತ್ತು ದ.ಕ ಜಿಲ್ಲಾಸಹಕಾರಿ ಯೂನಿಯನ್, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 67ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ‘ಕೊರೋನಾ ಸೋಂಕು-ಆತ್ಮನಿರ್ಭರ ಭಾರತ -ಸಹಕಾರ ಸಂಸ್ಥೆಗಳು’ ಎಂಬ ಧ್ಯೇಯಯೊಂದಿಗೆ ‘ವ್ಯವಹಾರ ಉದ್ಯೋಗ ಕಳೆದುಕೊಂಡವರು, ಭಾಧಿತರು ಪುನರುದ್ಯೋಗಸ್ಥರಾಗಲು ಕೌಶಲ್ಯಾಭಿವೃದ್ಧಿ’ ದಿನಾಚರಣೆ ನವೆಂಬರ್ 18 ರಂದು ಬೆಳಿಗ್ಗೆ 10.30 ಕ್ಕೆ ಮಂಗಳೂರು ಕುಲಶೇಖರ ಡೇರಿ ಆವರಣದಲ್ಲಿ ನಡೆಯಲಿದೆ.

 

 

ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕ ವೇದವ್ಯಾಸ ಡಿ. ಕಾಮತ್ ಸಹಕಾರ ಸಪ್ತಾಹದ ಉದ್ಘಾಟನೆ ಮಾಡಲಿದ್ದಾರೆ.ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿಯ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ನಂದಿನಿ ಅನ್ ವೀಲ್ಸ್ ವಾಹನಕ್ಕೆ ಚಾಲನೆ ನೀಡಲಿದ್ದಾರೆ.ಮಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

Also Read  ಕರಾವಳಿ ಉತ್ಸವದಲ್ಲಿ  ಇಂದಿನ ಕಾರ್ಯಕ್ರಮಗಳು

 

 

error: Content is protected !!
Scroll to Top