ಖ್ಯಾತ ಬಂಗಾಳಿ ನಟ ಸೌಮಿತ್ರಾ ಚಟರ್ಜಿ ವಿಧಿವಶ

(ನ್ಯೂಸ್ ಕಡಬ) newskadaba.com ಕೋಲ್ಕತಾ . 15: ಕಳೆದೊಂದು ತಿಂಗಳಿನಿಂದ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಬಂಗಾಳಿ ನಟ ಸೌಮಿತ್ರಾ ಚಟರ್ಜಿ ಅವರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ವಿಧಿವಶರಾಗಿದ್ದಾರೆ.

85 ವರ್ಷದ ಸೌಮಿತ್ರ ಚಟರ್ಜಿಯವರು ಸ್ಪಂದಿಸುತ್ತಿಲ್ಲ ಮತ್ತು ಒಂದಕ್ಕಿಂತ ಹೆಚ್ಚು ಲೈಫ್ ಸಪೋರ್ಟ್ ಯಂತ್ರಗಳನ್ನು ಅಳವಡಿಸಲಾಗಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸೌಮಿತ್ರ ಚಟರ್ಜಿಯವರು ಆಸ್ಪತ್ರೆಯಲ್ಲಿ ಕೊನೆಯುಸೆರೆಳೆದಿದ್ದಾರೆಂದು ವರದಿಗಳು ತಿಳಿಸಿವೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಸೌಮಿತ್ರ ಚಟರ್ಜಿ ಅವರಿಗೆ ಇತ್ತೀಚೆಗೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಹೀಗಾಗಿ, ‌ ಅವರ ಆರೋಗ್ಯದಲ್ಲಿ ಮತ್ತಷ್ಟು ಏರಿಳಿತ‌ ಉಂಟಾಗಿತ್ತು, ಅವರ ಆರೋಗ್ಯದಲ್ಲಿ ಮತ್ತಷ್ಟು ವಿಷಮವಾಗಿದ್ದರಿಂದ ಅವರನ್ನು ಐಸಿಯುಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.ಸೌಮಿತ್ರ ಅವರು ಪತ್ನಿ, ಮಗ, ಮಗಳನ್ನು ಅಗಲಿದ್ದಾರೆ.

Also Read  ಪಾಲಕ್ಕಾಡ್: ತುತ್ತು ಅನ್ನ ಕದ್ದ ಆರೋಪದಲ್ಲಿ ಆದಿವಾಸಿ ಯುವಕನ ಹೊಡೆದು ಸಾಯಿಸಿದ ಸ್ಥಳೀಯರು ► ಘಟನೆಯ ಸಮಗ್ರ ವರದಿ ಕೇಳಿದ ಕೇಂದ್ರ ಸರಕಾರ

error: Content is protected !!
Scroll to Top