ಕಂಬಳ ಆಯೋಜನೆಗೆ ಕೇಂದ್ರದ ಮುಂದಿನ ಗೈಡ್ ಲೈನ್ಸ್ ಬಳಿಕ ನಿರ್ಧಾರ

(ನ್ಯೂಸ್ ಕಡಬ) newskadaba.com ಮಂಗಳೂರು, . 15: ತುಳುನಾಡಿನ ಜಾನಪದ ಕ್ರೀಡೆ ಕಂಬಳ ಆಯೋಜನೆಗೆ ಕೇಂದ್ರ ಸರಕಾರದ ಮುಂದಿನ ಗೈಡ್‌ಲೈನ್ಸ್‌ ಬಳಿಕ ನಿರ್ಧರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಭರವಸೆ ನೀಡಿದ್ದಾರೆ.

ಧಾರ್ಮಿಕ ನಂಬಿಕೆ ಮತ್ತು ಕೃಷಿ ಸಂಸ್ಕೃತಿಯನ್ನೊಳಗೊಂಡ ತುಳುನಾಡಿನ ಜಾನಪದ ಕ್ರೀಡೆ ಕಂಬಳ ನಡೆಸಲು ಜಿಲ್ಲಾಡಳಿತ ಉತ್ಸುಕವಾಗಿದೆ ಮತ್ತು ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದು ಕೋಟ ತಿಳಿಸಿದರು.ಜಾನಪದ ಕ್ರೀಡೆ ಕಂಬಳದ ಹಿಂದೆ ದೈವಾರಾಧನೆ, ಕೃಷಿ ವೈಭವವಿದ್ದು, ಇದನ್ನು ಪ್ರವಾಸೋದ್ಯಮದ ನೆಲೆಯಲ್ಲೂ ಪರಿಗಣಿಸಲಾಗುತ್ತಿದೆ. ಕರಾವಳಿ ಆರ್ಥಿಕತೆಗೂ ಕಂಬಳ ಸಹಕಾರಿಯಾಗಿದೆ. ಕಂಬಳ ಆಯೋಜನೆ ವಿಚಾರದಲ್ಲಿ ಕಂಬಳ ಸಮಿತಿಗೆ ಸಂಪೂರ್ಣ ಸಹಕಾರ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಸಂಸದ ನಳಿನ್‌ ಕುಮಾರ್‌ ತಿಳಿಸಿದರು.

Also Read  ಅಂತರ್ ರಾಜ್ಯ ಮಟ್ಟದ ವಚನ ರಚನಾ ಸ್ಪರ್ಧೆ ➤ ಕಡಬದ ಸಮ್ಯಕ್ ಜೈನ್ ಪ್ರಥಮ

 

error: Content is protected !!
Scroll to Top