ಪುತ್ತೂರು: ಐತಿಹಾಸಿಕ ಗಯದಲ್ಲಿ ಮೀನು ಹಿಡಿಯಲು ತೆರಳಿದ ವ್ಯಕ್ತಿ ಕಣ್ಮರೆ

(ನ್ಯೂಸ್ ಕಡಬ) newskadaba.com ಪುತ್ತೂರು . 15: ಪುತ್ತೂರಿನಲ್ಲಿ ವ್ಯಕ್ತಿಯೊಬ್ಬರು ಮೀನು ಹಿಡಿಯಲು ಹೋಗಿ ಕಣ್ಮರೆಯಾಗಿದ್ದಾರೆ. ಮೀನು ಹಿಡಿಯಲು ಬಲೆ ಹಾಕಿ ನೀರಿಗೆ ಇಳಿದ ವ್ಯಕ್ತಿ ವಾಪಾಸ್ಸಾಗದೆ ನಾಪತ್ತೆಯಾದ ಘಟನೆ ಇರ್ದೆ ಗ್ರಾಮದ ದೂಮಡ್ಕ ಸಮೀಪ ಸೆಲ್ಯಾರ್ಣೆ ಬಲ್ಯಂದ್ರ ಗಯದಲ್ಲಿ ನಡೆದಿದೆ. ಇದೊಂದು ಐತಿಹಾಸಿಕ ಸ್ಥಳವಾಗಿದ್ದು, ಈ ಹಿಂದೆ ದೈವ ನರ್ತಕ ರೊಬ್ಬರು ಈ ಗಯದಲ್ಲಿ ಬಿದ್ದು ಕಣ್ಮರೆಯಾಗಿದ್ದರು.

 

 

ಆರ್ಲಪದವು ವ್ಯಕ್ತಿ ನಾರಾಯಣ ರವರು ಒಡ್ಯದಲ್ಲಿರುವ ತನ್ನ ಮೂವರು ಸಂಬಂಧಿಕರೊಂದಿಗೆ ಮೀನು ಹಿಡಿಯಲೆಂದು ತೆರಳಿದ್ದಾರೆ. ಸೀರೆ ಹೊಳೆಯ ಸೆಲ್ಯಾರ್ಣೆ ಬಲ್ಯಂದ್ರ ಗಯದಲ್ಲಿ ಮೀನು ಹಿಡಿಯಲೆಂದು ಹೊಳೆಗೆ ಇಳಿದಿದ್ದಾರೆ. ಬಳಿಕ ಬಲೆ ಕಟ್ಟುತ್ತಿದ್ದವರು ಕಣ್ಮರೆಯಾಗಿದ್ದಾರೆ, ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

Also Read  ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶ

 

 

error: Content is protected !!
Scroll to Top