ಮಾಣಿಬೆಟ್ಟು: ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಮಾಣಿಬೆಟ್ಟು . 15: ಮಾಣಿಬೆಟ್ಟುವಿನ ಸಂತೋಷ್ ಎಂಬುವರು ಶನಿವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ದೇವಚಳ್ಳ ಗ್ರಾಮದ ಕರಂಗಲ್ಲಿನ ಪರಮೇಶ್ವರ ಗೌಡರ ಪುತ್ರ ಸಂತೋಷ್ ಎಂಬುವರು ನ.14 ರ ಶನಿವಾರ ರಾತ್ರಿ ತಿಮೆಟ್ ಕುಡಿದಿದ್ದಾರೆ. ಇದನ್ನ ಅರಿತ ಮನೆಯವರು ತಕ್ಷಣವೇ ಸಂತೋಷ್ ರವರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿ ಮಧ್ಯೆ ನಿಧನರಾಗಿದ್ದಾರೆ. ಇನ್ನು, ಇವರು ಯಾವ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ. ಮೃತರು ತಂದೆ, ತಾಯಿ ಸಹೋದರ, ಸಹೋದರಿ, ಪತ್ನಿ, ಕುಟುಂಬಸ್ಥರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Also Read  ➤ ಆನ್‌ಲೈನ್ ವಂಚನೆ 18.43 ಲಕ್ಷ ರೂ. ಕಳೆದುಕೊಂಡ ಮಂಗಳೂರಿನ ವ್ಯಕ್ತಿ

 

 

error: Content is protected !!
Scroll to Top