ಸುಬ್ರಹ್ಮಣ್ಯ: ಕೆ.ಎಸ್.ಎಸ್ ಕಾಲೇಜಿನಲ್ಲಿ ಆತ್ಮನಿರ್ಭರ ಭಾರತ ಉದ್ಯೋಗ ನೈಪುಣ್ಯ ಶಿಬಿರ ಸಮಾಪನ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ . 15: ಸುಬ್ರಹ್ಮಣ್ಯದ ಕೆ.ಎಸ್.ಎಸ್ ಕಾಲೇಜಿನಲ್ಲಿ ಆತ್ಮನಿರ್ಭರ ಭಾರತ ಉದ್ಯೋಗ ನೈಪುಣ್ಯ ಶಿಬಿರವು ಶನಿವಾರ ರಾತ್ರಿ ಸಮಾಪನಗೊಂಡಿದೆ.

ಗ್ರಾಮ ವಿಕಾಸ ಸಮಿತಿ, ಮಂಗಳೂರು ವಿಭಾಗ ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ) ಪುತ್ತೂರು ಸಹಕಾರ ಭಾರತಿ ದ.ಕ ಜಿಲ್ಲೆ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜ, ಪುತ್ತೂರು, ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಹಾಗೂ ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೇಷಿ ಪತ್ತಿನ ಸರಕಾರಿ ಸಂಘ ನಿಯಮಿತ ಸುಬ್ರಹ್ಮಣ್ಯ ಇವುಗಳ ಸಹಯೋಗದೊಂದಿಗೆ ಆತ್ಮ ನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರವು  ದಿನಾಂಕ 08-11-2020 ರಿಂದ 14-11-2020 ರ ವರೆಗೆ ಕೆ.ಎಸ್.ಎಸ್. ಕಾಲೇಜಿನಲ್ಲಿ ನಡೆಯಿತು.ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಯವರು ಇಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ದೀಪ ಬೆಳಗಿಸುವುದರ ಮೂಲಕ ಶಿಬಿರನ್ನು ಉದ್ಘಾಟಿಸಿದ್ದರು.ಉದ್ಯೋಗ ತರಬೇತಿ ಶಿಬಿರದಲ್ಲಿ 400 ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.

Also Read  ಸಿಐಡಿ ಆರ್ಥಿಕ ವಿಭಾಗದ ಡಿಐಜಿಪಿ ಆರ್. ದಿಲೀಪ್ ಇನ್ನಿಲ್ಲ..!

 

Xl

error: Content is protected !!
Scroll to Top