ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಯವರಿಂದ ಕುಕ್ಕೆ ಕಾಮಗಾರಿಗಳ ಪರಿಶೀಲನೆ ➤ ಭಕ್ತರ ಅನುಕೂಲಕ್ಕೆ ಪ್ರತ್ಯೇಕ ಸುತ್ತು ಪೌಳಿ ನಿರ್ಮಾಣಕ್ಕೆ ಯೋಜನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ  . 14: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಪೂರ್ವಭಾವಿ ಸಭೆಗೆ ಆಗಮಿಸಿದ್ದ ದ.ಕ ಡಿಸಿ ರಾಜೇಂದ್ರ ಕೆ,ವಿ ರವರು ಶ್ರೀ ದೇವರ ದರ್ಶನ ಪಡೆದು ಬಳಿಕ ಪ್ರಗತಿ ಪರಿಶೀಲನೆ ನಡೆಸಿ ಬಳಿಕ ಭಕ್ತರಿಗೆ ಸೇವೆಗಳನ್ನು ನೆರವೇರಿಸಲು ಅನುಕೂಲವಾಗುವಂತೆ ಪ್ರತ್ಯೇಕ ಯೋಜನೆ ಕುರಿತು ಮಾತನಾಡಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಸುಸೂತ್ರವಾಗಿ ಸೇವೆಗಲನ್ನು ನೆರವೇರಿಸಲು ಹಾಗೂ ಅನ್ನ ಪ್ರಸಾದ ಸ್ವೀಕರಿಸಲು ಅನುಕೂಲವಾಗುವಂತೆ ಹೊಸದಾಗಿ ಪ್ರತ್ಯೇಕ ಪೂಜಾ ಶಾಲೆ ಅನ್ನ ಪ್ರಸಾದ ಶಾಲೆ, ಸುತ್ತು ಪೌಳಿ ನಿರ್ಮಿಸಲು ಕ್ರೀಯಾ ಯೋಜನೆ ತಯಾರಿಸಲು ನಿರ್ಧರಿಸಲಾಗಿದೆ, ಇದರಿಂದ ಕ್ಷೇತ್ರದಲ್ಲಿ ಸ್ವಚ್ಚತೆ ಕಾಪಾಡಲು ಸಹಕಾರಿಯಾಗುತ್ತದೆ ಎಂದು ದ. ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.

Also Read  ಉಪ್ಪಳಿಗೆ: ಆಕಸ್ಮಿಕವಾಗಿ ತೆಂಗಿನಮರವೊಂದು ಬಿದ್ದು ಕಾರ್ಮಿಕ ಮೃತ್ಯು

error: Content is protected !!
Scroll to Top