ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಆಚರಣೆಯ ಪೂರ್ವಭಾವಿ ಸಭೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ  . 14: ಡಿ. 12ರಿಂದ 22 ರವರೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಚಂಪಾಷಷ್ಠಿ ಆಚರಣೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿದ್ದು. ಕೋವಿಡ್ 19 ನಿಯಾಗಳಿಗಾನುಸಾರವಾಗಿ ಚಂಪಾಷಷ್ಠಿ ಜಾತ್ರಾ ಮಹೋತ್ಸವವನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

 


ಮುಜರಾಯಿ ಹಾಗೂ ಜಿಲ್ಲಾ ಉಸ್ತುವರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಶುಕ್ರವಾರ ದೇವಸ್ಥಾನದ ಆಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೃಗೊಂಡಿದ್ದಾರೆ. ಉರುಳು ಸೇವೆ, ಉಟೋಪಚಾರ, ವಸತಿ, ಕುಡಿಯುವ ನೀರು ವಿದ್ಯುತ್ ಪೂರೈಕೆ, ಸಂಬಂಧಿತ ವಿಚಾರಗಳ ಬಗ್ಗೆ ,ಹೊರೆಕಾಣಿಕೆ ಸ್ವೀಕಾರ , ಅನ್ನ ಪ್ರಸಾದ ವಿತರಣೆ , ತುಲಭಾರ ಸೇವೆ ಇತರೆ ಸೇವೆಗಳನ್ನು ನಡೆಸುವ ಬಗ್ಗೆ ಚರ್ಚಿಸಲಾಯಿತು. ನದಿಯ ಸ್ನಾನಘಟ್ಟದಲ್ಲಿ ನಡೆಯುವ ಉತ್ಸವ ಪೂರ್ವಭಾವಿಯಾಗಿ ಸ್ನಾನಘಟ್ಟದ ಹೂಳು ತೆಗೆಯುವ ಬಗ್ಗೆ , ಪಾರ್ಕಿಂಗ್ , ಬಂದೋಬಸ್ತ್, ವಾಹನ ವ್ಯವಸ್ಥೆ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕ್ರಮ ಕೈಗೊಳ್ಳುವ ಕುರಿತು ತಿರ್ಮಾಣಿಸಲಾಯಿತು.

 

 

ಇನ್ನು, ಷಷ್ಠಿ ಆಚರಣೆಯನ್ನು ಸೀಮಿತ ಭಕ್ತರ ಸಮಾಕ್ಷಮದಲ್ಲಿ ನಿಯಮಗಳನ್ನು ಅಳವಡಿಸಿಕೊಂಡು , ಸರಳವಾಗಿ ಸಂಪ್ರದಾಯ, ನಿಯಮಗಳಿಗೆ ಧಕ್ಕೆಯಾಗದಂತೆ, ವ್ಯವಸ್ಥಿತವಾಗಿ ಆಚರಿಸಲು ತಿರ್ಮಾಣ ಕೈಗೊಳ್ಳಲಾಗಿದೆ. ಇದರ ಜತೆಗೆ ಭಕ್ತರು ಕ್ಷೇತ್ರದೊಂದಿಗೆ ಸಹಕರಿಸುವಂತೆ ಹಾಗೂ ರಥೋತ್ಸವ ಸೇವಾರ್ಥಿಗಳಿಗೆ ಸೀಮಿತ ಪಾಸುಗಳನ್ನು ಮಾತ್ರ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಇನ್ನು ಈ ಸಭೆಯಲ್ಲಿ ಸುಳ್ಯ ಶಾಸಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್ ಅಂಗಾರ, ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಸೇರಿದಂತೆ ಅನೇಕ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

 

error: Content is protected !!

Join the Group

Join WhatsApp Group