ಬಿಳಿನೆಲೆ : ಶ್ರೀ ಗೋಪಾಲಕೃಷ್ಣ ದೇವಸ್ಥಾನ ದಲ್ಲಿ ಗೋ ಪೂಜೆ

(ನ್ಯೂಸ್ ಕಡಬ) newskadaba.com ಬಿಳಿನೆಲೆ . 14: ಶ್ರೀ ಗೋಪಾಲ ಕೃಷ್ಣ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ದೀಪಾವಳಿ ವಿಶೇಷವಾಗಿ ಗೋ ಪೂಜಾ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಅರ್ಚಕರಾದ ವೆಂಕಟೇಶ್ ಭಟ್ ಪೂಜಾ ಕಾರ್ಯವನ್ನು ನೆರವೇರಿಸಿದರು.

 

 

 

ಗೋಪೂಜಾ ದಿನವಾದ ಇಂದು ವರ್ಷಂಪ್ರತಿ ಜರಗುವ ಗೋ ಪೂಜೆಯು, ಇಂದು ಗೋವನ್ನು ಪೂಜಿಸುವುದರೊಂದಿಗೆ ವಿಜ್ರಂಭಣೆಯಿಂದ ಜರುಗಿತು. ಈ ಸಂದರ್ಭದಲ್ಲಿ ವಾಸ್ತುಶಿಲ್ಪಿ ಪ್ರಸಾದ್ ಮುನಿಯಂಗಳ, ತಿಮ್ಮಪ್ಪ ಗೌಡ ಪರ್ಲ, ವಿಶ್ವ ಹಿಂದೂ ಪರಿಷತ್ತಿನ ಗೌರವಾಧ್ಯಕ್ಷ ಜಯಪ್ರಕಾಶ್ ಮೋಂಟಡ್ಕ,ಅಧ್ಯಕ್ಷ ರಘು ನೆಟ್ಟಣ, ಬಜರಂಗ ದಳದ ಸಂಚಾಲಕ ಪ್ರಕಾಶ್ ಬಿಳಿನೆಲೆ, ಕಾರ್ಯದರ್ಶಿ ಹರ್ಶಿತ್ ಎರ್ಕ, ಮತ್ತು ವಿ.ಹಿಂ.ಪ. ನಾ ಸದಸ್ಯರು,ಯುವ ಮೋರ್ಚ ಮಂಡಲ ಸದಸ್ಯ ಹರ್ಶಿತ್ ಸೂಡ್ಲು,ಭಜನಾ ಮಂಡಳಿಯ ಅಧ್ಯಕ್ಷ ಜನಾರ್ದನ ಸೂಡ್ಲು ಮತ್ತು ಸದಸ್ಯರು,ಹಾಗೂ ಊರಿನ ಭಕ್ತಾದಿಗಳು ಭಾಗವಹಿಸಿ ಪೂಜೆಯಲ್ಲಿ ಪಾಲ್ಗೊಂಡರು. ದೇವಸ್ಥಾನ ದ ಅರ್ಚಕ ವೆಂಕಟೇಶ್ ಭಟ್ ಪೂಜಾ ಕಾರ್ಯವನ್ನು ನೆರವೇರಿಸಿದರು. ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯ ಸದಸ್ಯರಿಂದ ಸುಂದರ ಗೌಡ ಒಗ್ಗು ಇವರ ನೇತ್ರತ್ವದಲ್ಲಿ ಭಜನಾ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು. ಅಧಿಕ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದುಕೊಂಡರು .

Also Read  “ಕನ್ನಡದ ಕಿಚ್ಚು ಹತ್ತಿಸಿದ ಕನ್ನಡ ಮೇಷ್ಟ್ರು” - ಡಾ. ಚೂಂತಾರು

 

error: Content is protected !!
Scroll to Top