ಪಾಕ್ ಬಂಕರ್ ಸ್ಫೋಟಿಸಿದ ಭಾರತೀಯ ಸೇನೆ

(ನ್ಯೂಸ್ ಕಡಬ) newskadaba.com ಶ್ರೀನಗರ . 14: ಇಂದು ಬೆಳಗ್ಗೆ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿತ್ತು. ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದು, ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿಗೆ ಪ್ರತ್ಯುತ್ತರ ನೀಡಿರುವ ಇಂಡಿಯನ್ ಆರ್ಮಿ, ಪಾಕಿಸ್ತಾನದ ಮೂವರು ಕಮಾಂಡೋಗಳು ಸೇರಿದಂತೆ ಎಂಟು ಜನರನ್ನು ಹೊಡೆದುರಿಳಿಸಿದೆ.

 

ಪಾಕಿಸ್ತಾನ ಇಂದು ಜಮ್ಮು-ಕಾಶ್ಮೀರದ ಪೂಂಛ್, ಕೆರನ್, ಗುರೆಜ್ ಸೆಕ್ಟರ್ ನಲ್ಲಿ ಕದನ ವಿರಾಮ ಉಲ್ಲಂಘಿಸಿತ್ತು. ಕುಪ್ವಾರದಿಂದ ಬಾರಾಮುಲ್ಲಾವರೆಗೆ ಪಾಕಿಸ್ತಾನಿ ಸೇನೆ ಫೈಯರಿಂಗ್ ನಡೆಸಿದೆ.ಬಾರಾಮುಲ್ಲಾ ಸೆಕ್ಟರ್ ನಲ್ಲಿ ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್‍ಎಫ್ ಸಬ್ ಇನ್‍ಸ್ಪೆಕ್ಟರ್ ರಾಕೇಶ್ ಡೋಬಾಲ್ ಹುತಾತ್ಮರಾಗಿದ್ದಾರೆ. ಹುತಾತ್ಮ ರಾಕೇಶ್ ಉತ್ತರಾಖಂಡ ರಾಜ್ಯದ ಋಷಿಕೇಶ್ ಜಿಲ್ಲೆಯ ಗಂಗನಗರದ ನಿವಾಸಿ. ಉಡಿ ಸೆಕ್ಟರ್ ನಲ್ಲಿ ಸೇನೆಯ ಇಬ್ಬರು ಯೋಧರು ಮತ್ತು ಗುರೆಜ್ ನಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ದಾಳಿಗೆ ಪ್ರತ್ತುತ್ತರ ನೀಡಿದ ಇಂಡಿಯನ್ ಆರ್ಮಿ, ಪಾಕಿಸ್ತಾನದ ಬಂಕರ್, ಇಂಧನ ಪಂಪ್ ಮತ್ತು ಲಾಂಚ್ ಪ್ಯಾಡ್ ಸಹ ನೆಲಸಮಗೊಳಿಸಿದೆ. ಇದರಲ್ಲಿ 12ಕ್ಕೂ ಅಧಿಕ ಪಾಕ್ ಸೈನಿಕರು ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದು, ಎಂಟು ಜನ ಮೃತಪಟ್ಟಿದ್ದಾರೆ.

Also Read  ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮೈಸೂರಿಗೆ ಆಗಮನ

 

 

 

error: Content is protected !!
Scroll to Top