ಕುಕ್ಕೆ ಶ್ರೀ ಸುಬ್ರಹ್ಮಣ್ಯ: ಕೊರೋನಾ ಜಾಗೃತಿ ಜನಾಂದೋಲನಾ ಜಾಥಾ

(ನ್ಯೂಸ್ ಕಡಬ) newskadaba.com ಬಂಟ್ವಾಳ .14: ಪ್ರಾಥಮಿಕ ಆರೋಗ್ಯ ಕೇಂದ್ರ ಸುಬ್ರಹ್ಮಣ್ಯ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸುಬ್ರಹ್ಮಣ್ಯ, ಗ್ರಾ. ಪಂ. ಸುಬ್ರಹ್ಮಣ್ಯ, ಜೇಸಿಐ ಸುಬ್ರಹ್ಮಣ್ಯ ಕುಕ್ಕೆ ಶ್ರೀ ರೋಟರಿ ಕ್ಲಬ್ ಸುಬ್ರಹ್ಮಣ್ಯ, ಪರ್ವತಮುಖಿ ಫ್ರೆಂಡ್ಸ್ ಆಶ್ರಯದಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೊರೋನಾ ಜಾಗೃತಿ ಜನಾಂದೋಲನಾ ಜಾಥಾ ಕಳೆದ ದಿನ ನಡೆಯಿತು.

 

ದೇವಸ್ಥಾನದಿಂದ ಜಾಗೃತಿ ಜಾಥಾವು ಆರಂಭಗೊಂಡ ಬಳಿಕ ಕೊರೋನಾ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಸಾರ್ವಜನಿಕರಿಗೆ ಮತ್ತು ಆಗಮಿಸಿದ ಎಲ್ಲಾ ಭಕ್ತರಿಗೆ ಭಿತ್ತಿ ಪತ್ರ ನೀಡಲಾಯಿತು. ಕೊರೋನಾ ಜಾಗೃತಿ ಜಾಥಾವು ಶ್ರೀ ದೇವಳಯದಿಂದ ಆರಂಭವಾಗಿ ಕಾಶಿಕಟ್ಟೆ ತನಕ ಸಾಗಿತ್ತು . ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ. ಎಚ್, ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತ್ರಿಮೂರ್ತಿ, ಗ್ರಾ. ಪಂ. ಕಾರ್ಯದರ್ಶಿ ಮೋನಪ್ಪ.ಡಿ, ಶ್ರೀ ದೇವಳದ ಸಿಬ್ಬಂದಿಗಳು, ಕುಕ್ಕೆ ಶ್ರೀ ಖಾಸಗಿ ಟ್ಯಾಕ್ಸಿ ಚಾಲಕ ಮಾಲಕ ಸಂಘದ ಪದಾಧಿಕಾರಿಗಳು, ಆಶಾ ಕಾರ್ಯಕರ್ತರು, ಗ್ರಾ.ಪಂ. ಸಿಬ್ಬಂದಿಗಳು, ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Also Read  ಐವನ್ ಡಿ ಸೋಜ ಜೊತೆ ಕಾರ್ಯಕ್ರಮದಲ್ಲಿ ಇದ್ದ, ಬಿ. ರಮಾನಾಥ ರೈ ಸ್ವಯಂ ಕ್ವಾರಂಟೈನ್​.!

 

Xl

 

error: Content is protected !!
Scroll to Top