ಕಡಬ : ಯುವತಿಯ ನಂಬಿಸಲು ಹಿಂದು ಧರ್ಮೀಯನೆಂದು ನಾಟಕವಾಡಿದ.!

(ನ್ಯೂಸ್ ಕಡಬ) newskadaba.com ಕಡಬ . 13: ಫೇಸ್ಬುಕ್ನಲ್ಲಿ ಯುವತಿಯ ಸ್ನೇಹ ಗಳಿಸಿ ಆಕೆಯೊಂದಿಗೆ ತೀರ್ಥಯಾತ್ರೆ ನಡೆಸಿ ಅಲ್ಲಿ ಭಾವಚಿತ್ರ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಯುವಕನೋರ್ವನ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ ತಾಲೂಕು ಬಂಟ್ರ ಗ್ರಾಮದ ಮರ್ಧಾಳ ಪಾಲೆತ್ತಡ್ಕ ನಿವಾಸಿ ಅಬ್ದುಲ್ ರಜಾಕ್ ಎಂಬಾತ ತನ್ನ ಹೆಸರನ್ನು ಖುಷಿಕ್ ಯಾನೆ ಸಂಜು ಎಂದು ಪರಿಚಯಿಸಿಕೊಂಡಿದ್ದ.
ನನಗೆ ಹೆತ್ತವರಿಲ್ಲ, ಉತ್ತಮ ಸ್ನೇಹಿತರನ್ನು ಬಯಸುತ್ತಿದ್ದೇನೆ ಎಂದು ಫೇಸ್ಬುಕ್ನಲ್ಲಿ ಕೌಕ್ರಾಡಿ ಗ್ರಾಮದ 24ರ ಹರೆಯದ ಯುವತಿಯನ್ನು ಸಂಪರ್ಕಿಸಿದ್ದ. ಮಾತು ನಂಬಿದ ಯುವತಿ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ ಬಳಿಕ ವಾಟ್ಸಪ್ ನಂಬರ್ ನೀಡಿ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.

Also Read  ನೂಜಿಬಾಳ್ತಿಲ: ಸ್ವಸಹಾಯ ಸಂಘಗಳ ಸದಸ್ಯರೊಂದಿಗಿನ ಪ್ರಧಾನಿ ಸಂವಾದ ಟಿ.ವಿ.ಯಲ್ಲಿ ವೀಕ್ಷಣೆ

ನ.1ರಂದು ಯುವತಿಯು ಮನೆಯವರ ಒಪ್ಪಿಗೆ ಪಡೆದು ಆತನೊಂದಿಗೆ ಧರ್ಮಸ್ಥಳಕ್ಕೆ ತೆರಳಿದ್ದಳು. ಈ ವೇಳೆ ಹಣೆ ತುಂಬಾ ದೇವರ ಪ್ರಸಾದವನ್ನು ನಾಮ ಬಳಿದು ಯುವತಿಯೊಂದಿಗೆ ಫೋಟೋ ತೆಗೆಸಿಕೊಂಡಿದ್ದ ರಜಾಕ್ ಬಳಿಕ ಆ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ. ದುರುದ್ದೇಶಪೂರಿತವಾಗಿ ಈ ಕೃತ್ಯವೆಸಗಿರುವುದು, ಸುಳ್ಳು ಹೇಳಿ ವಂಚಿಸಿದ ಕಾರಣಕ್ಕೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಯು ಕನಕರಾಜು ಎಂಬ ಹೆಸರಿನಲ್ಲೂ ಫೇಸ್ಬುಕ್ನಲ್ಲಿ ನಕಲಿ ಖಾತೆ ಹೊಂದಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.

 

error: Content is protected !!
Scroll to Top